ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ:  ಮೂವರು ಆರ್ ಓಗಳು ಸಸ್ಪೆಂಡ್.

Promotion

ಬೆಂಗಳೂರು, ನವೆಂಬರ್,21,2022(www.justkannada.in):  ಬೆಂಗಳೂರಿನಲ್ಲಿ ವೋಟರ್​ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಿಬಿಎಂಪಿ ಮುಖ್ಯ ಆಯುಕ್ತರ ಕೈಗೆ ಸೇರಿದ್ದು, ಈ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿರುವುದು ಬಹಿರಂಗವಾಗಿದೆ.

ತನಿಖಾ ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಲುಮೆ  ಸಂಸ್ಥೆಗೆ ಬಿಎಲ್​ಒ ಎಂದು ಐಡಿ ಕಾರ್ಡ್ ಹಂಚಿಕೆ‌ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆ ಮಹಾದೇವಪುರ ವಲಯದ ಆರ್​ಓ ಚಂದ್ರಶೇಖರ್, ಚಿಕ್ಕಪೇಟೆ  ವಲಯದ ಆರ್​ಓ ಭೀಮಾಶಂಕರ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಆರ್​ಓ ಸುಹೇಲ್ ಅಹ್ಮದ್​​ ರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್ , 4 ತಂಡಗಳ ತನಿಖಾ ವರದಿ ಬಿಬಿಎಂಪಿ ಕೈಸೇರಿದೆ. ಈ ವರದಿಗಳನ್ನು ಆಧರಿಸಿ ಬಿಬಿಎಂಪಿ ಅಂತಿಮ ವರದಿ ಸಿದ್ಧಪಡಿಸುತ್ತದೆ ಎಂದು  ಹೇಳಿದ್ದಾರೆ.

Key words: Voter ID –Revision- Illegal –Case-Three ROs – suspended.