ವೋಟರ್ ಐಡಿ ಅಕ್ರಮ ಪ್ರಕರಣ: ನಾಳೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ-ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ನವೆಂಬರ್,22,2022(www.justkannada.in): ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್,  ಕೇಂದ್ರ ಚುನವಣಾ ಆಯೋಗ ಭೇಟಿಗೆ ನಾಳೆ ಸಮಯ ಸಿಕ್ಕಿದೆ. ನಾಳೆ ಭೇಟೊಯಾಗಿ ದೂರು ನೀಡುತ್ತೇವೆ. ಕಾಂಗ್ರೆಸ್ ನವರು ಅಕ್ರಮ ಮಾಡಿದ್ದಾರೆ ಅಂತಾ  ಸಿಎಂ ಹೇಳುತ್ತಾರೆ. ನಾವೇನಾದರೂ  ತಪ್ಪು ಮಾಡಿದ್ದರೇ ಅದಕ್ಕೆ ಸಾಕ್ಷಿ ಇರುತ್ತೆ ಅಲ್ವಾ..? ಚಿಲುಮೆ ಮಾತ್ರವಲ್ಲ ಬೇರೆ ಸಂಸ್ಥೆಗಳಿಂದಲೂ ಈ ಕೃತ್ಯ ನಡೆದಿದೆ. ಮತದಾರರ ಹೆಸರು ಡಿಲಿಟ್ ಮಾಡಲು ಫಾರಂ 7 ಇರಬೇಕು. ಅದನ್ನೆಲ್ಲಾ ಹೇಗೆ ಡಿಲೀಟ್ ಮಾಡಿದ್ರು…?  ಫಾರಂ ಎಲ್ಲಿದೆ..? ಯಾರು ಸಹಿ ಹಾಕಿದರು..?  ಎಲ್ಲವೂ ಗೊತ್ತಾಗಬೇಕು. ವೂಟರ್ ಐಡಿ ಅಕ್ರಮದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇನ್ನು ಇಡಿ ಕೇಸ್ ವಿಚಾರವಾಗಿ ನಾಳೆ ಕೋರ್ಟ್ ನಲ್ಲಿ ಕೇಸ್ ಇದೆ. ಇಡಿ ಕೇಸ್ ವಿಚಾರವಾಗಿ ದೆಹಲಿಗೆ ತೆರಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Voter ID -Illegal Case-complain – Central- Election –Commission-DK Shivakumar.