ಜೂನ್ ಮೊದಲ ವಾರದಲ್ಲೆ ಮೈಸೂರು ಚಾಮರಾಜೇಂದ್ರ ಮೃಗಾಲಯ ಪುನಾರಂಭ- ಸಚಿವ ಎಸ್.ಟಿ ಸೋಮಶೇಖರ್….

Promotion

ಮೈಸೂರು,ಮೇ,30,2020(www.justkannada.in): ಕೊರೋನಾ ವೈರಸ್ ಹಾವಳಿಯಿಂದಾಗಿ ಲಾಕ್ ಡೌನ್ ಜಾರಿಯಾಗಿದ್ದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ  ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ದಾನಿಗಳಿಂದ ಸಂಗ್ರಹಿಸಿದ 25.16 ಲಕ್ಷ ರೂಪಾಯಿಯ ಚೆಕ್ ಅನ್ನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ ಸೋಮಶೇಖರ್ ವಿತರಿಸಿದರು.

ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿಗೆ ಚೆಕ್ ಅನ್ನ ಹಸ್ತಾಂತರಿಸಿದರು. ಈ ಮೂಲಕ 3ನೇ ಬಾರಿ ಮೃಗಾಲಯಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಚೆಕ್ ವಿತರಿಸಿದ್ದಾರೆ.

ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮ್ ದಾಸ್, ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಇನ್ನಿತರರು ಭಾಗಿಯಾಗಿದ್ದರು.Visit –Mysore- Jayachamarajendra Zoo- Issue - Check - Minister -ST Somashekhar

ಬಳಿಕ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ S.T.ಸೋಮಶೇಖರ್,  ಜೂನ್ ಮೊದಲ ವಾರದಲ್ಲೆ ಮೃಗಾಲಯ ಪುನರಾರಂಭ. ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಅಧಿಕೃತ ಆದೇಶ ಬರಲಿದೆ. ಮೃಗಾಲಯದ ಪುನರಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಾಣಿಗಳ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಪುನರಾರಂಭ ಮಾಡ್ತಿವಿ. ಮೃಗಾಲಯದಿಂದ ಪುನರಾರಂಭಕ್ಕೆ ಮನವಿ ಕೇಳಿ ಬಂದಿತ್ತು. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದಿದ್ದೇವೆ ಎಂದರು.

ಮೃಗಾಲಯ ಪುನರಾರಂಭಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದೆ‌. ಅರಣ್ಯ ಸಚಿವರು ಹಾಗೂ ಸರ್ಕಾರದ ಅನುಮತಿ ಬಾಕಿ ಇದೆ. ಅಧಿಕೃತ ಆದೇಶ ಬಂದ ನಂತರ ಮೃಗಾಲಯ ಪುನರಾರಂಭ ಆಗಲಿದೆ. ಕರ್ನಾಟಕದ ಇತರೆ ಮೃಗಾಲಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇವಲ ಮೈಸೂರು ಮೃಗಾಲಯ ಪುನರಾರಂಭದ ಬಗ್ಗೆ ಮಾತ್ರ ನಾನು ಮಾತನಾಡುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಮೈಸೂರು ಮೃಗಾಲಯಕ್ಕೆ 25.14 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವ ಎಸ್.ಟಿ.ಎಸ್.
* ಒಟ್ಟಾರೆ ಇನ್ಫೋಸಿಸ್ ನ 22 ಲಕ್ಷವೂ ಸೇರಿ 2.85 ಕೋಟಿ ರೂ. ದೇಣಿಗೆ ಸಂಗ್ರಹಿಸಿ ನೀಡಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು.  ಕಳೆದ ಬಾರಿ 2.38 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಲಾಗಿತ್ತು

ಮೈಸೂರು: ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ 25 ಲಕ್ಷದ 14,500 ರೂಪಾಯಿ ಚೆಕ್ ಅನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಹಸ್ತಾಂತರ ಮಾಡಿದರು. ಈ ಮೂಲಕ ಒಟ್ಟಾರೆಯಾಗಿ 2.85 ಕೋಟಿ ರೂ. ದೇಣಿಗೆಯನ್ನು ಸಂಗ್ರಹಿಸಿ ನೀಡಿದಂತಾಗಿದೆ. ಕಳೆದ ಬಾರಿ 2.38 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಲಾಗಿತ್ತು. ಇದಲ್ಲದೆ ಸಚಿವ ಎಸ್ ಟಿ ಎಸ್ ಮನವಿ ಮೇರೆಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 22 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೃಗಾಲಯವನ್ನು ಪ್ರಾರಂಭಿಸಲು ನಾನು ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸರ್ಕಾರದ ಜೊತೆಯೂ ಚರ್ಚೆ ಮಾಡಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಹೊರಬೀಳಲಿದೆ. ಅರಣ್ಯ ಸಚಿವರೂ ಸಹ ಪರವಾಗಿದ್ದಾರೆ. ಒಮ್ಮೆ ಆದೇಶ ಬಂದ ಮೇಲೆ ಇಲ್ಲಿ ಶಾಸಕರಾದ ರಾಮದಾಸ್ ಸೇರಿದಂತೆ ಹಲವು ಪ್ರಮುಖರು ಈ ಬಗ್ಗೆ ಮತ್ತೊಮ್ಮೆ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಿದ್ದೇವೆ ಎಂದು ಹೇಳಿದರು.

Key words: Visit –Mysore- Jayachamarajendra Zoo- Issue – Check – Minister -ST Somashekhar