ಆ ಪತ್ರಕರ್ತನಿಂದಾಗಿಯೇ ವಿಶ್ವನಾಥ್ ಹೋಗಿದ್ದು: ‘ಹಳ್ಳಿಹಕ್ಕಿ’ ರಾಜೀನಾಮೆ ಬಗ್ಗೆ ಬಹಿರಂಗ ಆರೋಪ ಮಾಡಿದ ಸಚಿವ ಸಾ.ರಾ ಮಹೇಶ್..

Promotion

ಬೆಂಗಳೂರು,ಜು,19,2019(www.justkannada.in): ಒಬ್ಬ ಪತ್ರಕರ್ತರಿಂದ ವಿಶ್ವನಾಥ್ ರಿಸೈನ್ ಮಾಡಿದ್ದಾರೆ. ಆ ಪತ್ರಕರ್ತ ,ಅರ್ಧ ಪತ್ರಕರ್ತ,ಅರ್ಧ ರಾಜಕಾರಣಿ. ಆ ಪತ್ರಕರ್ತನಿಂದಾಗಿಯೇ ವಿಶ್ವನಾಥ್ ಹೋಗಿದ್ದು ಎಂದು ಸಚಿವ ಸಾ.ರಾ ಮಹೇಶ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಸಚಿವ .ಸಾ.ರಾ ಮಹೇಶ್, ವಿಶ್ವನಾಥ್  ಅವರನ್ನ ತೋಟಕ್ಕೆ ಕರೆಸಿ ಮಾತನಾಡಿದ್ದೆ.  ಹೆಚ್. ಹೆಚ್.ವಿ ಸಚಿವ ಸ್ಥಾನ ಬೇಡ ಎಂದಿದ್ದರು. ಚುನಾವಣೆಗೆ ಸಾಕಷ್ಟು ಸಾಲ ಮಾಡಿಕೊಂಡಿ ಬಿಟ್ಟಿದ್ದೇನೆ ಎಂದಿದ್ದರು. ಅಲ್ಲದೆ ಬಿಜೆಪಿಯಿಂದ 26 ಕೋಟಿ ಬಂದಿದೆ ಎಂದಿದ್ದರು. ಬಿಜೆಪಿಯು ಪತ್ರಕರ್ತರೊಬ್ಬರ ಮೂಲಕ ತಮಗೆ ಆಫರ್ ಕಳಿಸಿದೆ ಎಂದು ವಿಶ್ವನಾಥ್ ಅಂದು ಹೇಳಿದ್ದರು. ಒಬ್ಬ ಪತ್ರಕರ್ತರಿಂದ ವಿಶ್ವನಾಥ್ ರಿಸೈನ್ ಮಾಡಿದ್ದಾರೆ.ಆ ಪತ್ರಕರ್ತ ,ಅರ್ಧ ಪತ್ರಕರ್ತ,ಅರ್ಧ ರಾಜಕಾರಣಿ ಎಂದು ಆರೋಪಿಸಿದರು.

ವಿಶ್ವನಾಥ್ ಗೆ ವಿಮಾನ ಕೊಟ್ಟವರು ಯಾರು. ವಿಶ್ವನಾಥ್ ಅವರನ್ನೇ ಕರೆಸಿ ಅವರೇ ಹೇಳಲಿ. ವಿಶ್ವನಾಥ್ ಎಷ್ಟಕ್ಕೆ ಸೇಲಾಗಿದ್ದಾರೆಂದು ಹೇಳಲಿ ಎಂದು ಸಚಿವ ಸಾ.ರಾ ಮಹೇಶ್ ಆಗ್ರಹಿಸಿದರು.

Key words: Vishwanath resigning– journalist-Minister- sa ra Mahesh -session