ಮುಂದಿನ ಸೆಪ್ಟಂಬರ್ ಒಳಗೆ ವಿಷ್ಣು ದಾದಾ ಅವರ ಸ್ಮಾರಕ ಪೂರ್ಣ- ನಟ ಅನಿರುಧ್

Promotion

ಮೈಸೂರು,ಡಿಸೆಂಬರ್,30,2021(www.justkannada.in): ವಿಷ್ಣು ದಾದಾ ಅವರ ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ನಟ ಅನಿರುಧ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ನಟ ಅನಿರುಧ್, ಈಗಾಗಲೇ ವಿಷ್ಣು ದಾದಾ ಸ್ಮಾರಕ ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಸ್ಮಾರಕದಲ್ಲಿ ವಿಷ್ಣು ದಾದಾರ 700ಕ್ಕೂ ಅಧಿಕ ಪೊಟೋ ಬಳಸಿ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇವೆ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ರಂಗಭೂಮಿ ಶಿಬಿರಗಳು ಸಹ ಇಲ್ಲಿ ನಡೆಯಲಿದೆ. ಇಂಡಿಯನ್ ಫಿಲಂ ಟೆಲಿವಿಷನ್ ಇನ್ಸ್ಟಿಟ್ಯೂಟ್ ನ ಶಾಖೆಯನ್ನ ಇಲ್ಲಿ ಪ್ರಾರಂಭಿಸುವ ಪ್ರಯತ್ನ ಇದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆ ಕಾರ್ಯ ನಡೆಯಲಿದೆ. ಈ ಪ್ರಯತ್ನಗಳು ನಡೆಯುತ್ತಿದೆ ಎಂದು ತಿಳಿಸಿದರು.

ನಾಳೆ ಕರ್ನಾಟಕ ಬಂದ್ ವಿಚಾರ ಕುರಿತು ಮಾತನಾಡಿದ ಅನಿರುದ್ಧ್, ಬಂದ್ ಎಲ್ಲದಕ್ಕೂ ಪರಿಹಾರ ಅಲ್ಲ. ಬಂದ್ ನಿಂದ ನಮ್ಮ ಹೋರಾಟ ಎಲ್ಲರಿಗೂ ತಿಳಿಯುತ್ತೆ. ಆದ್ರೆ ಅದರಿಂದ ತುಂಬಾ ಜನರಿಗೆ ನಷ್ಟವಾಗುತ್ತೆ. ಯಾವುದೇ ಹೋರಾಟಕ್ಕೂ ಬಂದ್ ಉತ್ತರವಲ್ಲ. ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕು ಈ ರೀತಿ ಬಂದ್ ಬೇಡ ಎಂದರು.

ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಎಂಬ ವಿಚಾರ ಕುರಿತು ಮಾತನಾಡಿದ ನಟ ಅನಿರುಧ್ , ಪ್ರಸ್ತುತ ಬಹಿರಂಗ ಹೋರಾಟ ಮಾಡಲು ಅವಕಾಶ ಇಲ್ಲ. ಒಂದು ಕಡೆ ಕೋವಿಡ್ ಮತ್ತೋಂದು ಕಡೆ ಕರ್ಪ್ಯೂ ಇದೆ. ಇಂತಹ ವಾತಾವರಣದಲ್ಲಿ ಒಂದೇ ವೇದಿಕೆಯಲ್ಲಿ ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಅದಕ್ಕಾಗಿ ಅವರವರ ಅನಿಸಿಕೆಗಳನ್ನು ನಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಯಾವಾಗಲೂ ಒಂದೇ. ಕನ್ನಡ ಚಿತ್ರರಂಗದ ನಾಯಕತ್ವಕ್ಕೆ ಶಿವಣ್ಣ ಇದ್ದಾರೆ. ಚಿತ್ರರಂಗದ ಪ್ರಮುಖರು ಅವರ ಜೊತೆ ಕೂತು ಮಾತನಾಡಿದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: Vishnu Dada’s- monument-full- within -next –September-mysore-actor – Anirudh