ಮತ್ತೊಂದಷ್ಟು ದಾಖಲೆ ಬರೆಯಲು ಕೊಹ್ಲಿ ರೆಡಿ !

Promotion

ಗಯಾನ, ಆಗಸ್ಟ್ 08, 2019 (www.justkannada.in): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರು ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ವೆಸ್ಟ್‍ ‍ಇಂಡೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಅವಕಾಶ ಸಿಕ್ಕಿದೆ. ಮಿಯಾಂದಾದ್ ವಿಂಡೀಸ್ ವಿರುದ್ಧ 1930 ರನ್ ಗಳಿಸಿದ್ದರು. ಕೊಹ್ಲಿಗೆ ಈ ದಾಖಲೆ ಮುರಿಯಲು 19 ರನ್ ಸಾಕು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಗರಿಷ್ಠ ಏಕದಿನ ರನ್ ಗಳಿಸಿದ ಸಾಧನೆ ವಿಂಡೀಸ್ ನ ರಾಮ್ ನರೇಶ್ ಸರ್ವಾನ್ ಹೆಸರಲ್ಲಿದೆ.

ಸರ್ವಾನ್ 700 ರನ್ ಮಾಡಿದ್ದರು. ಕೊಹ್ಲಿ ಸದ್ಯಕ್ಕೆ 556 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿಯೇ ಅಲ್ಲದಿದ್ದರೂ ಈ ಸರಣಿಯಲ್ಲಿ ಆ ದಾಖಲೆ ಮುರಿಯುವ ಅವಕಾಶ ಕೊಹ್ಲಿಗಿದೆ.