‘ಮ್ಯಾನ್ ವರ್ಸಸ್ ವೈಲ್ಡ್’ಗೆ ಬರ್ತಾರಾ ಕಿಂಗ್ ಕೊಹ್ಲಿ !?

Promotion

ಬೆಂಗಳೂರು, ಆಗಸ್ಟ್ 03, 2022 (www.justkannada.in): ‘ಮ್ಯಾನ್ ವರ್ಸಸ್ ವೈಲ್ಡ್’ ನಿಂದ ವಿಶ್ವಾದ್ಯಂತ ಹೆಸರಾಗಿರುವ ಬೇರ್ ಗ್ರಿಲ್ಸ್  ಜತೆ ಕಾಡಿನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಜ್ಜೆ ಹಾಕಲಿದ್ದಾರಾ?

ಇಂತಹದೊಂದು ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಇತ್ತೀಚೆಗಷ್ಟೇ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೇರ್​, ಸಿಂಹದ ಹೃದಯ ಹೊಂದಿರುವ ವಿರಾಟ್ ಜೊತೆ ಸಾಹಸ ಮಾಡಿದರೆ ಅದ್ಭುತ ಎನಿಸುತ್ತದೆ’ ಎಂದು ಹೇಳಿದ್ದರು.

ಬೇರ್ ಗ್ರಿಲ್ಸ್ ಹೇಳಿಕೆ ಬಗ್ಗೆ ವಿರಾಟ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿರಾಟ್ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಇಂತಹ ಶೋಗಳಲ್ಲಿ ಭಾಗವಹಿಸಲು ಬಿಸಿಸಿಐ ಅನುಮತಿ ಅಗತ್ಯವಿದೆ.

ಕೆಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ವಿರಾಟ್ ಬೇರ್ ಗ್ರಿಲ್ಸ್ ಜೊತೆ ಸಾಹಸ ಮಾಡುವುದನ್ನು ನೋಡಲು ಅಭಿಮಾನಿಗಳು ಖಂಡಿತ ಕಾತುರರಾಗಿದ್ದಾರೆ.