ಲಾಕ್ ಡೌನ್ ನಿಯಮ ಉಲ್ಲಂಘನೆ ಆರೋಪ: ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರನ  ವಿರುದ್ದ ಎಫ್ ಐಆರ್ ದಾಖಲು…

ಬಳ್ಳಾರಿ,ಜೂ,15,2020(www.justkannada.in): ಮದುವೆ ವೇಳೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ಕ ಮತ್ತು ಅವರ ಪುತ್ರನ ವಿರುದ್ದ ಎಫ್ ಐಆರ್ ದಾಖಲಾಗಿದೆ.violating - lockdown –rule- FIR - PT Parameshwar Naik - Son.

ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಅವರ  ಪುತ್ರನ ಮದುವೆ ಇಂದು ಬಳ್ಳಾರಿ ಜಿಲ್ಲೆ ಲಕ್ಷ್ಮೀಪುರ ತಾಂಡದಲ್ಲಿ ನಡೆಯಿತು.  ಈ ವಿವಾಹದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಸಚಿವರು ಹಾಗೂ ರಾಜಕೀಯ ನಾಯಕರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಬಹುತೇಕರು ಮಾಸ್ಕ್ ಧರಿಸಿರಲ್ಲಿಲ್ಲ. ಹಾಗೆಯೇ ಲಾಕ್ ಡೌನ್ ನಿಯಮದ ಪ್ರಕಾರ ಮದುವೆಗೆ 50 ಮಂದಿ ಮಾತ್ರ ಭಾಗಿಯಾಗಲು ಅನುಮತಿ ಇದೆ. ಆದರೆ ಪರಮೇಶ್ವರ್ ನಾಯ್ಕ್ ಪುತ್ರನ ವಿವಾಹದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ಈ ಕುರಿತು ಮಾಧ್ಯಮಗಳಲ್ಲಿ ಭಾರಿ ಟೀಕೆಯಾಗಿತ್ತು. ಇದೀಗ ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ಅವರ ದೂರಿನ ಮೇರೆಗೆ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರನ ವಿರುದ್ದ  ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎನ್ನಲಾಗಿದೆ.

Key words: violating – lockdown –rule- FIR – PT Parameshwar Naik – Son.