ದಳಪತಿ ವಿಜಯ್‌ ‘ಮಾಸ್ಟರ್’ ಕನ್ನಡಕ್ಕೆ ಡಬ್ !

Promotion

ಬೆಂಗಳೂರು, ಮಾರ್ಚ್ 18, 2020 (www.justkannada.in): ದಳಪತಿ ವಿಜಯ್‌ ಇನ್ನು ಮುಂದೆ ಕನ್ನಡದಲ್ಲೂ ಮಾತನಾಡಲಿದ್ದಾರೆ!

ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರ ಕನ್ನಡಲ್ಲೂ ಡಬ್‌ ಆಗಿ ತೆರೆಗೆ ಬರಲಿದೆ. ವಿಜಯ್ ಸಿನಿಮಾಗಳು ತಮಿಳು-ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದವು. ಆದರೆ, ಈ ಬಾರಿ ಕನ್ನಡದಲ್ಲೂ ಡಬ್‌ ಮಾಡಿ, ತೆರೆಗೆ ತರುವ ಆಲೋಚನೆ ನಿರ್ಮಾಪಕರಿಗಿದೆ.

ಈ ಹಿಂದೆ ನಟ ಅಜಿತ್‌ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿದ್ದವು. ಆದರೆ, ಅಷ್ಟಾಗಿ ಗೆಲುವು ಕಂಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ವಿಜಯ್‌ ಸಿನಿಮಾ ಕನ್ನಡಕ್ಕೆ ಡಬ್‌ ಆಗುತ್ತಿರುವುದು ವಿಶೇಷ.