ಒಟಿಟಿಗೆ ಬರುತ್ತಿದೆ ವಿಜಯ್ ದೇವರಕೊಂಡ-ಪುರಿ ಜಗನ್ನಾಥ್ ಕಾಂಬಿನೇಷನ್’ನ ‘ಲೈಗರ್’

Promotion

ಬೆಂಗಳೂರು, ಸೆಪ್ಟೆಂಬರ್ 20, 2022 (www.justkannada.in): ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್  ಕಾಂಬಿನೇಷನ್’ನ ಲೈಗರ್ ಸಿನಿಮಾ ಸೆಪ್ಟೆಂಬರ್ 22ರಂದು ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಮೊದಲ ಶೋನಲ್ಲಿಯೇ ಸೋಲನ್ನುಂಡಿತ್ತು.

ಇದೀಗ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈಗರ್ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸೆ.22ರಂದು ಬಿಡುಗಡೆಯಾಗದಿದ್ದರೆ, 25ರಂದು ಖಚಿತವಾಗಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಲೈಗರ್ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಭಾಷೆಯಲ್ಲಿ ಬೇರೊಂದು ಅಪ್ಲಿಕೇಶನ್‌ನಲ್ಲಿ ಬೇರೊಂದು ದಿನ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.