ವಿದ್ಯಾಗಮ ತಾತ್ಕಾಲಿಕ ಸ್ಥಗಿತ: ನ.2ರಿಂದ ಶಾಲೆಗೆ ಶಿಕ್ಷಕರ ಹಾಜರಿ ಕಡ್ಡಾಯ….

Promotion

ಬೆಂಗಳೂರು,ಅಕ್ಟೋಬರ್,30,2020(www.justkannada.in): ಮಧ್ಯಂತರ ರಜೆ ಅವಧಿ ಮುಕ್ತಾಯ ಹಿನ್ನೆಲೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ನವಂಬರ್ 2 ರಿಂದ  ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.vidyagama-  Teacher- attendance -compulsory – school-nov 2

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ  12.10.2020 ರಿಂದ ದಿನಾಂಕ 30.10.2020ರವರೆಗೆ ಮಧ್ಯಂತರ ರಜೆಯನ್ನು ಘೋಷಿಸಲಾಗಿತ್ತು. ಇಂದಿಗೆ ಮಧ್ಯಂತರ ರಜೆ ಮುಗಿಯಲಿದೆ.  ಈ ಹಿನ್ನೆಲೆ  ನಾಳೆ(ಅ.31) ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನ ಎಲ್ಲಾ ಶಾಲೆಗಳಲ್ಲಿ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾತ್ರ ಹಾಜರಿದ್ದು ಕೋವಿಡ್-19 ಪ್ರಮಾಣ ಕಾರ್ಯಾಚರಣಾ ವಿಧಾನದ ಅನುಸಾರ ಆಚರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.vidyagama-  Teacher- attendance -compulsory – school-nov 2

ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ನಡುವೆ ನವೆಂಬರ್ 2ರಿಂದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಮಾತ್ರ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಯಾವುದೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗತಕ್ಕದ್ದಲ್ಲ. ಜತೆಗೆ ಇಲ್ಲಿಯವರೆಗೆ ಜರುಗಿದ ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಣೆ ಮಾಡಿ ವಿದ್ಯಾರ್ಥಿವಾರು ಸಾಧನೆಯನ್ನು ಹಾಗೂ ಕೊರತೆಯನ್ನು ಪಟ್ಟಿಮಾಡಲು ಹಾಗೂ ಸದರಿ ವಿಶ್ಲೇಷಣೆ ಅನುಸಾರ ಮುಂದಿನ ಕಲಿಕೆಗೆ ಅವರ ಬೋಧನಾ ಕಲಿಕಾ ಯೋಜನೆ, ಬೋಧನ ಕಲಿಕಾ ಸಾಮಾಗ್ರಿ ತಯಾರಿಕೆ ಮುಂತಾದ ಕಾರ್ಯಕ್ರಮಗಳನ್ನ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚನೆ ನೀಡಿದೆ.vidyagama-  Teacher- attendance -compulsory – school-nov 2

ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ಡಿಎಸ್ ಇ ಆರ್ ಟಿ ಯೂಟ್ಯೂಬ್ ಚಾನಲ್  ಜ್ಞಾನದೀಪದಲ್ಲಿ ಅಳವಡಿಸಿರುವ ವಿಡಿಯೋಗಳನ್ನು ಮತ್ತು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ಮತ್ತು ದೀಕ್ಷಾ ಮೋರ್ಟಲ್‌ನಲ್ಲಿ ಅಳವಡಿಸಿರುವ ಸಾಮಗ್ರಿಗಳನ್ನು ಮತ್ತು ಮಾರ್ಗದರ್ಶನವನ್ನು ದೂರವಾಣಿ ಸಮೂಹ ಮಾಧ್ಯಮದ ಮೂಲಕ ನೀಡಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

 

Key words: vidyagama-  Teacher- attendance -compulsory – school-nov 2