ಗಣೇಶೋತ್ಸವದಲ್ಲಿ ವಿ.ಡಿ ಸಾವರ್ಕರ್ ಫೋಟೊ ವಿಚಾರ: ಬಿ.ಕೆ ಹರಿಪ್ರಸಾದ್  ಟೀಕೆ.

Promotion

ಚಾಮರಾಜ ನಗರ,ಆಗಸ್ಟ್,25,2022(www.justkannada.in): ಗಣೇಶೋತ್ಸವದಲ್ಲಿ  ವಿ.ಡಿ ಸಾವರ್ಕರ್ ಫೋಟೊ ಇಡಬೇಕೆಂದು ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಗಣೇಶೋತ್ಸವ ದೇವರಮೂರ್ತಿ ಜೊತೆ ನಾಸ್ತಿಕನ ಫೋಟೊ ಹಾಸ್ಯಸ್ಪದ.  ವಿಡಿ ಸಾವರ್ಕರ್ ಆತ್ಮ ಚರಿತ್ರೆ ಸರಿಯಾಗೆ ಓದದೆ ಇರುವವರು ರಾಜಕೀಯ ಹಿತಾಸಕ್ತಿಗಾಗಿ  ಫೋಟೊ ಇಡುತ್ತಿದ್ದಾರೆ. ವಿಡಿ ಸಾವರ್ಕರ್ ಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ ದೇವರು ದಿಂಡರ ಬಗ್ಗೆ ನಂಬಿಕೆ ಇಲ್ಲದ ಸಾವರ್ಕರ್,  ಮೊಹಮ್ಮದ್ ಆಲಿ ಸೇರಿ  ದೇಶವನ್ನ ಈ ಸ್ಥಿತಿಗೆ ತಂದಿಟ್ಟದ್ದಾರೆ ಎಂದು ಹರಿಹಾಯ್ದರು.

Key words: VD Savarkar-  photo- Ganeshotsava- issue -B.K Hariprasad.