ಮೈಸೂರಲ್ಲಿ ವಾಟಾಳ್ ನಾಗರಾಜ್ ಭಾನುವಾರ ಟಾಂಗಾ ಗಾಡಿ ಏರಿದ್ದು ಯಾಕೆ ಗೊತ್ತ..?

 

ಮೈಸೂರು, ಜೂ.28, 2020 : (www.justkannada.in news ) : ದೇಶದಲ್ಲಿ ಡಿಸೆಲ್ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಂದ ವಿನೂತನ ಪ್ರತಿಭಟನೆ.
ಜನ ನರಕದಲ್ಲಿ ಜೀವನ ಮಾಡುವಂತಾಗಿದೆ. ತೈಲ ಬೆಲೆ ಇಳಿಕೆ ಮಾಡುವಂತೆ ಜಟಕ‌ ಗಾಡಿಯೇರಿ ಪ್ರತಿಭಟನೆ ಮಾಡಿದ್ದೇನೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮೈಸೂರಲ್ಲಿ ಹೇಳಿಕೆ ನೀಡಿದ ವಾಟಾಳ್.

ಕೊರೋನಾ ದೇಶದಲ್ಲಿ ಹೆಚ್ಚಾಗಿದೆ.

ಕೊರೋನಾ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಕೇಂದ್ರದ ಮಂತ್ರಿಗಳು ಕರ್ನಾಟಕದ ಭೂತಗಳಾಗಿದ್ದಾರೆ. ರಾಜ್ಯದಿಂದ ಗೆದ್ದ ಎಂಪಿಗಳು ಮತ್ತು ಮಂತ್ರಿಗಳು ಪ್ರೇತಗಳು. ನಿರ್ಮಲ ಸೀತರಾಮನ ಸರಿಯಾಗಿ ಕೆಲಸ ಮಾಡ್ತಿಲ್ಲ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ನಿರ್ಮಲ ಸೀತಾರಾಮನ್ ಸೇರಿ ಹಲವರನ್ನ ಹರಾಜು ಹಾಕುತ್ತೇವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಹರಾಜು ಹಾಕುತ್ತೇವೆ. ಯಾರು ಬೇಕಾದ್ರು ಬಂದು ಹರಾಜಿನಲ್ಲಿ‌ ಭಾಗವಹಿಸಬಹುದು. ಇಂತಹ ಅವಿವೇಕಿಗಳು ಆಡಳಿತ ನಡೆಸುತ್ತಿದ್ದಾರೆ.

vatal.nagaraj-mysore-protest-petrole-hike

ಇನ್ನೊಂದು ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿಯಾಗುತ್ತೆ. ನಂತರ ಯಡಿಯೂರಪ್ಪ ತಮ್ಮ ಪ್ಯಾಂಟು ಶರ್ಟು ಹರಾಜು ಕೂಗಾಬೇಕಾಗುತ್ತೆ. ಇದು ಹಾಸ್ಯ ಅನಿಸಿದ್ರು, ಮುಂದಿನ ಪರಿಸ್ಥಿತಿ ಇದೆ ರೀತಿ ಇರುತ್ತೆ. ಮೈಸೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್.

ಭೂ ಸುಧಾರಣಾ ಕಾಯ್ದೆ ಇದು ಕರಳ ಕಾಯ್ದೆ‌. ಈ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿಗೆ ಬರಬಾರದು‌. ಈಗಾಗಲೇ ಬೆಂಗಳೂರಿನಲ್ಲಿ ಬಿಡಿಎ ಸೈಟ್ ಗಳನ್ನ ಮಾರಾಟ ಮಾಡುತ್ತಿದ್ದಾರೆ. ಮುಂದೆ ವಿಧಾನಸೌಧವನ್ನು ಮಾರಿದರು ಆಶ್ಚರ್ಯ ಇಲ್ಲ. ಈ ಕಾಯ್ದೆಯಿಂದ ರೈತರಿಗೆ ಅನಾನುಕೂಲವಾಗಲಿದೆ. ಈ ಕಾಯ್ದೆ ಜಾರಿಗೆ ಬಂದರೆ ಉಳ್ಳವರಿಗೆ ಹೆಚ್ಚು ಅನುಕೂಲವಾಗುತ್ತದೆ‌. ಆದ್ದರಿಂದ ಈ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿಗೆ ಬರಬಾರದು. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ.

vatal.nagaraj-mysore-protest-petrole-hike

oooo

key words : vatal.nagaraj-mysore-protest-petrole-hike