ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಸಚಿವ ವಿ.ಸೋಮಣ್ಣ: ಈ ಬಗ್ಗೆ ಅವರ ಪ್ರತಿಕ್ರಿಯೆ ಏನು ಗೊತ್ತೆ..?

Promotion

ಬೆಂಗಳೂರು,ಏಪ್ರಿಲ್,11,2023(www.justkannada.in):   ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವಿಚಾರಗಳು ಮುನ್ನೆಲೆ ಬಂದ ಹಿನ್ನೆಲೆ ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸೋಮಣ್ಣ, ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರ ಚರ್ಚೆಯಾಗಿರುವುದು ನಿಜ. ಆದರೆ ವರುಣಾದಿಂದ ಸ್ಪರ್ಧಿಸಲ್ಲ ಎಂದು ವರಿಷ್ಠರಿಗೆ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನ ಹೈಮಾಂಡ್ ನಾಯಕರಿಗೆ ತಿಳಿಸಿದ್ದೇನೆ.  ಅಂತಿಮವಾಗಿ ನಮ್ಮ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಯಾರೂ ಕೂಡ ಸ್ವತಂತ್ರವಾಗಿ ನಿಂತು ಗೆದ್ದಿಲ್ಲ  ಎಸ್,ಎಂ ಕೃಷ್ಣರಂತಹ ಬಿರುಗಾಳಿ ಇದ್ದಾಗಲೇ ಸ್ವತಂತ್ರವಾಗಿ ನಿಂತು ಗೆದ್ದಿದ್ದೇನೆ.  ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಎಂದು ಸಚಿವ ಸೋಮಣ್ಣ ತಿಳಿಸಿದರು.

ಚಾಮರಾಜನಗರದಿಂದ  ಬಿಎಸ್ ಯಡಿಯೂರಪ್ಪ ತನ್ನ ಆಪ್ತರಿಗೆ ಟಿಕೆಟ್ ಕೇಳುತ್ತಿದ್ದಾರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಇಂದು ಸಂಜೆ ಅಥವಾ ನಾಳೆ  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ.   ಬಿಎಸ್ ವೈ ಪ್ರಶ್ನಾತೀತ ನಾಯಕರು.  ರಾಷ್ಟ್ರೀಯ ನಾಯಕರು ಸಂದರ್ಭ ನೋಡಿ ತೀರ್ಮಾನ ಮಾಡುತ್ತಾರೆ ಎಂದರು.

Key words: varuna- Constituency-minister-V.Somanna-contast