ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡಿ- ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಬಿಎಸ್ ವೈ ಭೇಟಿಯಾಗಿ ಮನವಿ…

ಮೈಸೂರು,ಸೆ,9,2019(www.justkannada.in): ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ  ನೀಡಿ ಎಂದು ವಾಲ್ಮೀಕಿ ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಗೃಹ ಕಛೇರಿ ಕೃಷ್ಣಾ ದಲ್ಲಿ  ಸಿಎಂ ಯಡಿಯೂರಪ್ಪ ಅವರನ್ನ  ವಾಲ್ಮೀಕಿ ಸಮುದಾಯದ ಗುರುಪೀಠ ವಾಲ್ಮಿಕಿ ಪ್ರಸನ್ನಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ  ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನ ಹೇಳಿಕೊಂಡರು. ವಾಲ್ಮೀಕಿ ಸಮುದಾಯದ ಸ್ವಾಮಿಗಳ ಜೊತೆ ಸಚಿವ ಶ್ರೀರಾಮುಲು, ಶಾಸಕ ರಾಜುಗೌಡ ಆಗಮಿಸಿದರು. ಮೀಸಲಾತಿ ಮನವಿ ಜೊತೆಗೆ ಡಿಸಿಎಂ ಸ್ಥಾನಕ್ಕೆ ಮನವಿ ಮಾಡಿದರು. ಈಗಾಗಲೇ ಡಿಸಿಎಂ ಸ್ಥಾನದ  ರೇಸ್ ನಲ್ಲಿ ಶ್ರೀರಾಮುಲು ಹಾಗೂ ‌ಅನರ್ಹ ಶಾಸಕ ರಮೇಶ್ ‌ಜಾರಕಿಹೊಳಿ ಇದ್ದಾರೆ. ಹೀಗಾಗಿ ‌ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

ಸಿಎಂ ಬಿಎಸ್ ವೈ ಭೇಟಿ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಇವತ್ತು ನಮ್ಮ ಸಮುದಾಯದ ಸ್ವಾಮೀಜಿಗಳೊಂದಿಗೆ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸಿ ಅಂತ ಮನವಿ ಮಾಡಿದ್ದೇವೆ. ಮೀಸಲಾತಿ ಹೆಚ್ಚಳಕ್ಕೆ ಸಮಿತಿ ಕೂಡಾ ಮಾಡಲಾಗಿತ್ತು. ಈ ಸಮಿತಿಯು ಇನ್ನೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಇದರ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

ವಾಲ್ಮಿಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಮಾತನಾಡಿ, ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡುವಂತೆ ಮನವಿ ಮಾಡಿದ್ದೇವೆ. ಜೊತೆಗೆ ಮೂವರು ಸಮಯದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ನಮ್ಮ ಮನವಿ ಪರಿಗಣಿಸುವ ಭರವಸೆ ಇದೆ ಎಂದರು.

Key words: Valmiki community – DCM –position- CM BS yeddyurappa –Swamiji- appealed.