ಲಸಿಕಾ ಅಭಿಯಾನ: ಜನಪ್ರತಿನಿಧಿಗಳ ವಿರುದ್ಧ ತಿರುಗಿಬಿದ್ದ ಸಾರ್ವಜನಿಕರು.

Promotion

ಮೈಸೂರು,ಜೂನ್,21,2021(www.justkannada.in): ಲಸಿಕೆ ಪಡೆಯಲು ಅಗತ್ಯಕ್ಕೂ ಹೆಚ್ಚು ಜನರು ಬಂದಿರುವುದರಿಂದ ಗೊಂದಲ ಉಂಟಾಗಿ ಜನಪ್ರತಿನಿಧಿಗಳ ವಿರುದ್ಧವೇ ಸಾರ್ವಜನಿಕರು ತಿರುಗಿ ಬಿದ್ಧ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ  ಶಾಸಕ ಎಲ್. ನಾಗೇಂದ್ರ ನೇತೃತ್ವದಲ್ಲಿ ಲಸಿಕೆ ಅಭಿಯಾನ ಆಯೋಜಿಸಲಾಗಿತ್ತು. ನಗರದ ಮಂಚೆಗೌಡನ ಕೊಪ್ಪಲಿನ ಪಬ್ಲಿಕ್ ಶಾಲೆಯಲ್ಲಿ ಲಸಿಕೆ ಹಾಕಲು ಸಿದ್ಧತೆ ನಡೆಸಲಾಗಿತ್ತು. ಲಸಿಕೆ ಪಡೆಯಲು ಬೆಳಗ್ಗೆಯಿಂದಲೇ ಜನರು ಬಂದು ಸರತಿ ಸಾಲಿನಲ್ಲಿ ನಿಂತಿದ್ದರು.

ಈ ಮಧ್ಯೆ ಎರಡು ವಾರ್ಡ್ ಗಳನ್ನ ಸೇರಿ 500 ಮಂದಿಗೆ ಲಸಿಕೆ ನೀಡುವ ಬಗ್ಗೆ ಪಾಲಿಕೆ ಸದಸ್ಯರು ಮಾಹಿತಿ ನೀಡಿದ್ದರು. ಆದರೆ ಕೊನೆಗಳಿಗೆಯಲ್ಲಿ ಜನರ ಗುಂಪು ಹೆಚ್ಚಾಗಿದ್ದು,  500ಕ್ಕೂ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಳ್ಳಲು ಆಗಮಿಸಿದ್ದರು. ಲಸಿಕೆ ಪಡೆಯಲು ಅಗತ್ಯಕ್ಕೂ ಹೆಚ್ಚು ಜನರು ಬಂದ ಹಿನ್ನೆಲೆ ಲಸಿಕಾ ಕೇಂದ್ರದಲ್ಲಿ ಗೊಂದಲ ಉಂಟಾಗಿದ್ದು, ಈ ವೇಳೆ ಶಾಸಕ ಎಲ್. ನಾಗೇಂದ್ರ ಹಾಗೂ ಪಾಲಿಕೆ ಸದಸ್ಯರ ಜತೆ ಜನರು ವಾಗ್ವಾದಕ್ಕಿಳಿದ ಘಟನೆ ನಡೆಯಿತು.

ಕೆಲವು ಮಂದಿ ಲಸಿಕೆ ಪಡೆಯದೇ ನಿರಾಸೆಯಿಂದ ಮನೆಗಳತ್ತ ತೆರಳಿದರು. ಈ ವೇಳೆಯಲ್ಲಿ ವಾಗ್ವಾದಕ್ಕಿಳಿದ ಸಾರ್ವಜನಿಕರನ್ನ ಶಾಸಕ ಎಲ್. ನಾಗೇಂದ್ರ ಸಮಾಧಾನ ಪಡಿಸಿದರು. ಮುಂದಿನವಾರ ಮತ್ತೆ ಅಭಿಯಾನ ನಡೆಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.

Key words: Vaccination-campaign-public – turned- against – representatives.