ಇಂದಿನಿಂದ ಮೈಸೂರು ಮಹಾನಗರ ಪಾಲಿಕೆಯಿಂದ ಲಸಿಕೆ ಅಭಿಯಾನ.

ಮೈಸೂರು,ಜೂನ್,16,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊ‌ನಾ ನಿಯಂತ್ರಣಕ್ಕಾಗಿ ಇಂದಿನಿಂದ ಲಸಿಕೆ ಅಭಿಯಾನ ಕಾರ್ಯಕ್ರಮವನ್ನ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದೆ.jk

ಇಂದಿನಿಂದ  ಜೂನ್ 20 ರವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಅಭಿಯಾನ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ  4ರವರೆಗೆ ಪುರಭವನದಲ್ಲಿ ಲಸಿಕೆ ಹಾಕಲಾಗುವುದು. ನೋಂದಾಯಿತ ಹಾಗೂ ನೋಂದಾಯಿಸಲ್ಪಡದವರಿಗೂ ಲಸಿಕೆ ಹಾಕಲಾಗುತ್ತದೆ.mysore-city-corporation-budget-plans-announced

ನಾಳೆ ಜೂನ್ 17 ರಿಂದ 19 ರವರೆಗೆ ವಿಶೇಷ ಚೇತನರಿಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಲಸಿಕೆ ಅಭಿಯಾನವನ್ನ  ಮೈಸೂರು ಮಹಾನಗರ ಪಾಲಿಕೆ ನಡೆಸಲಿದ್ದು  ತಿಲಕನಗರದ ಅಂಧಮಕ್ಕಳ‌ ಪಾಠಶಾಲೆಯಲ್ಲಿ ಲಸಿಕೆ  ಹಾಕಲಾಗುತ್ತದೆ.

ಲಸಿಕೆ ಹಾಕಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಗಳಿಗೆ ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ, ವಿಶೇಷ ಚೇತನರಿಗೆ ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರ ಕಡ್ಡಾಯವಾಗಿದೆ. ಲಸಿಕೆ ಅಭಿಯಾನ ಹಿನ್ನೆಲೆ ವಾರ್ಡ್ ವಾರು ಉಚಿತ ವಾಹನದ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

Key words: Vaccination -campaign -Mysore –city corporation