ವಿ.ಸೋಮಣ್ಣ ಅಂದ್ರೆ ವಿಕ್ಟರಿ ಸೋಮಣ್ಣ: ವರುಣಾದಲ್ಲಿ ಗೆದ್ಧೇ ಗೆಲ್ಲುತ್ತಾರೆ- ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ.

Promotion

ಮೈಸೂರು,ಏಪ್ರಿಲ್,17,2023(www.justkannada.in):   ರಾಜ್ಯ ವಿಧಾನಸಭಾ  ಚುನಾವಣೆಗೆ ದಿನಗಣನೆ ಆರಂಭವಾಗಿದ್ದು  ನಾಮಪತ್ರಸಲ್ಲಿಕೆ ಕಾರ್ಯ ಜೋರಾಗಿದೆ. ಈ ಮಧ್ಯೆ ಭಾರಿ ಕುತೂಹಲಕ್ಕೆ ಕಾರಣವಾಗಿರುವ ವರುಣಾ ಕ್ಷೇತ್ರದಿಂದ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ವಿ.ಸೋಮಣ್ಣ ಕಣಕ್ಕಿಳಿದಿದ್ದು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಈ ನಡುವೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಚಿವ ವಿ.ಸೋಮಣ್ಣ ಪರ ಪ್ರಚಾರದಲ್ಲಿ ತೊಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ವಿ.ಸೋಮಣ್ಣ ಅಂದರೇ ವಿಕ್ಟರಿ ಸೋಮಣ್ಣ. ವರುಣದಲ್ಲಿ ಸೋಮಣ್ಣ ಪರ ಜನರ ಬೆಂಬಲ ಸಿಗುತ್ತಿದೆ. ಸೋಮಣ್ಣ ವರುಣಾದಲ್ಲಿ ಗೆದ್ದೇ ಗೆಲ್ಲುತ್ತಾರೆ. ವರುಣಾ ಕ್ಷೇತ್ರ ವರ್ಣಮಯವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Key words: V. Somanna- Victory Somanna-win – Varuna-CM -Basavaraja Bommai