ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

kannada t-shirts

ನವದೆಹಲಿ,ಸೆಪ್ಟಂಬರ್,5,2020(www.justkannada.in): ಗಡಿಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿದ್ದು ಈ ಸಂಬಂಧ ಎರಡು ರಾಷ್ಟ್ರಗಳ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ, ಸಂಘರ್ಷ ಮುಂದುವರಿಯುತ್ತಿದೆ. ಇತ್ತೀಚೆಗೆ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆ  ನಡೆದು ಭಾರತೀಯ ಯೋಧರು ಹುತಾತ್ಮರಾಗಿದ್ದರು.ಹಾಗೆಯೇ ಚೀನಾ ಸೈನಿಕರು ಸಹ ಮೃತಪಟ್ಟಿದ್ದರು. ಬಳಿಕ ಮಾತುಕತೆ ನಡೆಸಲಾಗಿತ್ತು.us-president-donald-trump-ready-between-india-china

ಇದಾದ ಬಳಿಕವೂ ಚೀನಾ ಮತ್ತೆ ಖ್ಯಾತೆ ಮುಂದುವರೆಸಿದ್ದು ಈ ಹಿನ್ನೆಲೆ ಎರಡುರಾಷ್ಟ್ರಗಳ ನಡುವೆ ಸಂಘರ್ಷ ಮುಂದುವರೆದಿದೆ. ಈ ಕುರಿತು ಮಾತನಾಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ- ಚೀನಾ ನಡುವಿನ ಪರಿಸ್ಥಿತಿ ಹದಗೆಟ್ಟಿದೆ. ಚೀನಾ –ಭಾರತ ನಡುವಿನ ಮಾತುಕತೆಗೆ  ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Key words: US President -Donald Trump – ready –- between- India -China.

website developers in mysore