ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ: ದಾಖಲೆಗಳ ಸಮೇತವೇ ಶ್ರೀಗಳಿಗೆ ಸತ್ಯ ಹೇಳ್ತೇವೆ-ಶಾಸಕ ಸಿ.ಟಿ ರವಿ.

Promotion

ತುಮಕೂರು,ಮಾರ್ಚ್,21,2023(www.justkannada.in):  ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ. ದಾಖಲೆಗಳ ಸಮೇತವೇ ನಿರ್ಮಲಾನಂದನಾಥ ಶ್ರೀಗಳಿಗೆ ಸತ್ಯ ಹೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಟಿ ರವಿ,  ಉರಿಗೌಡ, ನಂಜೇಗೌಡರ ಬಗ್ಗೆ ಜವರೇಗೌಡರು ‘ಸುವರ್ಣ ಮಂಡ್ಯ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನಿರ್ಮಲಾನಂದನಾಥ ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ.  ನಿರ್ಮಲಾನಂದನಾಥ ಶ್ರೀಗಳ ಬಳಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತೇವೆ. ಉರಿಗೌಡ, ನಂಜೇಗೌಡ ಬಗ್ಗೆ ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಉರಿಗೌಡ, ನಂಜೇಗೌಡ ಹೆಸರು ಇವತ್ತು ನಿನ್ನೆಯಿಂದ ಪ್ರಾಮುಖ್ಯತೆಗೆ ಬಂದಿರುವುದಲ್ಲ. ಆದರೆ, ನಿರ್ಮಲಾನಂದನಾಥ ಸ್ವಾಮೀಜಿ ಮಾತನ್ನು ಗೌರವಿಸುತ್ತೇವೆ ಎಂದು ಹೇಳಿದರು.

ಉರಿಗೌಡ, ನಂಜೇಗೌಡ ಬಗ್ಗೆ ಸುಳ್ಳು ಎಂದು ಹೇಳಿದವರು, ಕಾಲ್ಪನಿಕ ಎಂದವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಶಾಸಕ ಸಿ.ಟಿ ರವಿ, ಟಿಪ್ಪು ಸುಲ್ತಾನ್ ​ನನ್ನು ವೈಭವೀಕರಿಸಲಾಗಿದೆ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಎಂಬುದಾಗಿ ಬಿಂಬಿಸಬೇಕಿತ್ತು ಎಂದು ಸಿಟಿ ರವಿ ಹೇಳಿದರು.

Key words: Urigowda- Nanjegowda – not -fictional characters- truth-MLA- CT Ravi