ಸಂಕ್ರಾಂತಿಗೆ ಉಪ್ಪಿ ‘ಕಬ್ಜ’ ಟೀಸರ್ ರಿಲೀಸ್ ಸಾಧ್ಯತೆ

Promotion

ಬೆಂಗಳೂರು, ಜನವರಿ 12, 2020 (www.justkannada.in): ಈ ಸಂಕ್ರಾಂತಿಗೆ ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ.

ಆರ್. ಚಂದ್ರು ನಿರ್ದೇಶನದಲ್ಲಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ತಂಡ ಈ ಮೊದಲು ಸಂಕ್ರಾಂತಿಗೆ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿತ್ತು.

ಮೂಲಗಳ ಪ್ರಕಾರ ಹಬ್ಬದಂದು ಚಿತ್ರದ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೂಲಕ ಬಹಳ ದಿನಗಳ ನಂತರ ಉಪೇಂದ್ರ ಫ್ಯಾನ್ಸ್ ಗೆ ಖುಷಿ ಸಮಾಚಾರ ಸಿಗಲಿದೆ.

ಈ ಬೆಳವಣಿಗೆಯಿಂದ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಈ ಸಂಕ್ರಾಂತಿ ಹಬ್ಬ ವಿಶೇಷವಾಗಿರಲಿದೆ.