ಲಾಕ್ ಡೌನ್‌ ನಡುವೆ ಅನಗತ್ಯ ಸಂಚಾರ: ಮೈಸೂರಿನಲ್ಲಿ ಒಂದೇ ದಿನ 309 ವಾಹನಗಳು ಸೀಜ್…

ಮೈಸೂರು,ಮೇ,4,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನ ತಡೆಗಟ್ಟುವ ಸಲುವಾಗಿ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿ ಸಾರಿಗೆ ಸಂಚಾರ, ಅಂಗಡಿ ಮುಂಗಟ್ಟು ಎಲ್ಲವನ್ನೂ ಬಂದಿ ಮಾಡಿದೆ. ಆದರೂ ಸಹ ಜನರ ಅನಗತ್ಯ ಓಡಾಟ ಹೆಚ್ಚಾಗಿದೆ.jk

ಈ ಮಧ್ಯೆ ಮೈಸೂರಿನಲ್ಲಿ ಲಾಕ್ ಡೌನ್‌ ನಡುವೆ ಅನಗತ್ಯವಾಗಿ ಓಡಾಡುತ್ತಿದ್ದ ಹಿನ್ನೆಲೆ  ನಿನ್ನೆ ಒಂದೇ ದಿನ 309 ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 289 ದ್ವಿಚಕ್ರವಾಹನ, 10 ಕಾರು, 10 ಆಟೋಗಳನ್ನ ಸೀಜ್ ಮಾಡಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದಕ್ಕೆ 241 ಪ್ರಕರಣ ದಾಖಲಾಗಿದೆ.Unnecessary - locked down- 309 vehicles –siege-single day - Mysore.

ಮೈಸೂರಿನಲ್ಲಿ ಪೊಲೀಸರು ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿರುವವವರ ವಾಹನ ಸೀಜ್ ಮಾಡುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ವಾಹನಗಳನ್ನು ವಾಪಸ್ಸು ಕೊಡುವುದಿಲ್ಲ ಪೊಲೀಸರು‌ ಹೇಳಿದ್ದಾರೆ.

Key words: Unnecessary – locked down- 309 vehicles –siege-single day – Mysore.