ವಿಶ್ವವಿದ್ಯಾನಿಲಯದ ಚರಿತ್ರೆಯಲ್ಲಿ ಒಂದು ಮರೆಯಲಾಗದ ದಿನ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್  

Promotion

ಮೈಸೂರು,ನವೆಂಬರ್,01,2020(www.justkannada.in) :  ಕನ್ನಡ ರಾಜ್ಯೋತ್ಸವದ ದಿನದಂದು ಶಾಸ್ತ್ರೀಯ ಕನ್ನಡ ಭಾಷೆಯ ಅತ್ಯುನ್ನತ ಸಂಸ್ಥೆ ವಿವಿಯ ಆವರಣಕ್ಕೆ ವಾಪಸ್ಸಾಗುತ್ತಿರುವುದು ಸ್ವಾಗತಾರ್ಹ ಸಂಗತಿ. ವಿಶ್ವವಿದ್ಯಾನಿಲಯದ ಚರಿತ್ರೆಯಲ್ಲಿ ಒಂದು ಮರೆಯಲಾಗದ ದಿನ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-logo

ಭಾರತೀಯ ಭಾಷಾ ಸಂಸ್ಥಾನ ಸಂಸ್ಥೆ ವತಿಯಿಂದ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ದಿನಾಚರಣೆ ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ, ಸ್ಥನಾಂತರ ವರ್ಚುಯಲ್ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ‘’ಲೋಕೋಪಕಾರಂ ಒಂದು ಪರಾಮರ್ಶೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿವಿಯ ಆವರಣಕ್ಕೆ ಶಾಸ್ತ್ರೀಯ ಕನ್ನಡ ಭಾಷೆಯ ಅತ್ಯುನ್ನತ ಸಂಸ್ಥೆಯು ವಾಪಸ್ಸಾಗುತ್ತಿರುವುದು ಒಂದರ್ಥದಲ್ಲಿ ಮರಳಿ ಮನೆಗೆ ಎನ್ನುವಂತ್ತಾಗಿದೆ. ಕೇಂದ್ರೀಯ ಭಾಷಾ ಸಂಸ್ಥಾನ(ಸಿಐಐಎಲ್) ಮೊದಮೊದಲು ನಮ್ಮ ಕ್ಯಾಂಪಸ್ ನಲ್ಲೇ ಇತ್ತು. ಈಗ ನಮ್ಮ ಇಎಂಆರ್ ಸಿ ಕಟ್ಟಡಲ್ಲೇ ಅದು ಸ್ಥಾಪಿತವಾಗಿ ಬಹಳ ವರ್ಷ ಡಾ.ಡಿ.ಪಿ.ಪಟ್ಟನಾಯಕರ ನಿರ್ದೇಶಕತ್ವದಲ್ಲಿ ನಡೆಯಿತು ಎಂದು ಸ್ಮರಿಸಿದರು.

ಬಳಿಕ ಸಿ ಐ ಐ ಎಲ್ ಈಗಿರುವ ಕಟ್ಟಡಕ್ಕೆ ಸ್ಥಳಾಂತರವಾಯಿತು. ಮಾನಸಗಂಗೋತ್ರಿ ಆವರಣದಲ್ಲಿ ನೇರವಾಗಿ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಡದ ಹಲವು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಅವು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಂಗಸಂಸ್ಥೆಗಳಾಗಿರುವುದರಿಂದ ನಾವು ಹೆಚ್ಚು ವ್ಯಥೆಪಡಬೇಕಾಗಿಲ್ಲ. ಏಕೆಂದರೆ ಅವೆಲ್ಲ ನಮ್ಮ ಸಮಾಜದ ಬೇರೆ, ಬೇರೆ ಯೋಗಕ್ಷೇಮಗಳಿಗೆ ಮೀಸಲಾಗಿರುವ ಸಂಸ್ಥೆಗಳಾಗಿವೆ ಎಂದರು.

ದಿನೆ, ದಿನೇ ಹೆಚ್ಚುತ್ತಿರುವ ಕೋರ್ಸ್ ಗಳು ಹಾಗೂ ವಿಭಾಗಗಳ ಕಾರಣದಿಂದ ಈ ಇಡೀ ಆವರಣ ನಮ್ಮ ಸುಪರ್ದಿನಲ್ಲೇ ಇದ್ದರೆ ಲೇಸಿತ್ತು ಅಂತ ಕೂಡ ಅನ್ನಿಸುತ್ತಿದೆ. ನಾನು ಈಗಾಗಲೇ ಹೇಳಿದ ಹಾಗೆ ಸಾರ್ವಜನಿಕರ, ವಿದ್ಯಾವಂತರ ಹಿತಕಾಯುವ ಜವಾಬ್ದಾರಿಯ ಸಂಸ್ಥೆಗಳಿಗೆ ಅವು ನೀಡಲ್ಪಟ್ಟಿರುವುದರಿಂದ ಸಮಾಧಾನವಾಗಿದೆ ಎಂದು ಹೇಳಿದರು.university-history-Unforgettable-Day-Mysore VV-Chancellor- Prof G.Hemant Kumar

ತಾತ್ಕಾಲಿಕವಾಗಿ ವಿವಿಯ ಪ್ರಾಧ್ಯಾಪಕ ವಸತಿ ಗೃಹವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಮ್ಮ ವಿವಿಯ ಈ ಉದ್ದೇಶಕ್ಕಾಗಿ ಶಾಶ್ವತವಾದ ಕಟ್ಟಡ ನಿರ್ಮಾಣ ಮಾಡಲು ಮತ್ತು ಇತರ ಸೌಲಭ್ಯಗಳಿಗಾಗಿ ಮೂರುವರೆ ಎಕರೆ ಭೂಮಿಯನ್ನು ಈಗಾಗಲೇ ನೀಡಿದೆ. ಕೇಂದ್ರ ಸರಕಾರ ಕಟ್ಟಡ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಹಣವನ್ನು ತೊಡಗಿಸಲು ಒಪ್ಪಿದೆ ಎಂದು ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ, ಸಂಸ್ಥೆ ತನ್ನ ಸ್ವಂತ ಆವರಣಕ್ಕೆ ಸ್ಥಳಾಂತರವಾಗುವುದೆಂಬ ಭರವಸೆ ನಮಗಿದೆ.  ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ತಂದುಕೊಡಲು ಹೋರಾಡಿದ ಎಲ್ಲ ಮಹಾನೀಯರನ್ನೂ ಮಹಿಳೆಯರನ್ನು ನಾವು ಇಂದು ಕೃತಜ್ಞತೆಯಿಂದ ನೆನೆಯಬೇಕು ಎಂದು ತಿಳಿಸಿದರು.

ತಮಿಳು ಭಾಷೆಯವರು ತಮ್ಮ ಪಾಲಿಗೆ ಬಂದಿರುವ ದ್ರವ್ಯವನ್ನು ಸಂಪೂರ್ಣವಾಗಿ ಅಥವಾ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ಕನ್ನಡದವರು ಕಾಲುಭಾಗವನ್ನು ಬಳಸಿಕೊಂಡಿಲ್ಲ ಎಂಬುದಾಗಿದೆ. ಇದು ನಿಜವಾಗಿದ್ದ ಪಕ್ಷದಲ್ಲಿ ಈ ಪರಿಸ್ಥಿತಿಯನ್ನು ಸರಿಪಡಿಸಬೇಕು. ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಳ್ಳುವವರೆಗೆ ಉತ್ಸಾಹವಿತ್ತು. ಅದಾದ ಮೇಲೆ ಉತ್ಸಾಹ ಕುಗ್ಗಿದೆ ಎನ್ನುವಂತಾಗಬಾರದು ಎಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ನಮ್ಮ ಭಾಷೆಯ ಬೆಳವಣಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಮಾರ್ಗದರ್ಶನ ಮಾಡಬಲ್ಲ ಹಿರಿಯರಿಗೆ ಕೊರತೆಯಿಲ್ಲ.  ಆದರೆ, ನನಗನ್ನಿಸುವುದು. ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಲ್ಲ ಯುವ ವಿದ್ವಾಂಸರ ಕೊರತೆಯಿಂದ ಎಂದರು.

ಪ್ರತಿ ವರ್ಷ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಹೊರಬರುತ್ತಿದ್ದಾರೆ. ಡಾಕ್ಟರೇಟ್ ಪದವಿ ಪಡೆಯುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ಇವರ ಪೈಕಿ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಯೋಗ್ಯತೆ ಇರುವವರನ್ನು ಸಂದರ್ಶನದ ಮೂಲಕ ಹೆಕ್ಕಿ ತೆಗೆದು, ಅವರಿಗೆ ಸೂಕ್ತ ಸಂಭಾವನೆಯನ್ನು ನೀಡಿ ಕೆಲಸಕ್ಕೆ ತೊಡಗಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.university-history-Unforgettable-Day-Mysore VV-Chancellor- Prof G.Hemant Kumar

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ್ ವರ್ಚುಯಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ, ಉನ್ನತ ಶಿಕ್ಷಣ ಇಲಾಖೆ ಶಿಕ್ಷಣ ಸಚಿವಾಲಯದ ಉಪಕಾರ್ಯದರ್ಶಿಗಳಾದ ಸುಮನ್ ದೀಕ್ಷಿತ್, ಕುಲಸಚಿವ ಪ್ರೊ.ಆರ್.ಶಿವಪ್ಪ ಇತರರು ಇದ್ದರು.

key words : university-history-Unforgettable-Day-Mysore VV-Chancellor- Prof G.Hemant Kumar