ಬದಲಾಗುತ್ತಿರುವ ತಾಪಮಾನದಿಂದಾಗಿ ಮುಂದಿನ ದಶಕಗಳಲ್ಲಿ ಪರಿಸರದ ಮೇಲೆ ಗಂಭೀರ ಪರಿಣಾಮ: ಪ್ರೊ. ಜಿ. ಹೇಮಂತ್ ಕುಮಾರ್

 

ಮೈಸೂರು, ಜುಲೈ ೦೨, ೨೦೨೧ (www.justkannada.in): “ಭೂಮಿಯಲ್ಲಿರುವ ಸಮೃದ್ಧ ಜೀವವೈವಿಧ್ಯತೆ ಮೊದಲಿನಿಂದಲೂ ಸತತವಾಗಿ ಬದಲಾಗುತ್ತಿರುವ ತಾಪಮಾನ ಹಾಗೂ ಅದರಿಂದ ಎದುರಾಗುವ ಬದಲಾವಣೆಗಳನ್ನು ನಿರ್ವಹಿಸುತ್ತಿದೆ. ನಾವು ಪ್ರಸ್ತುತ ಪೃಥ್ವಿಯ ಮೇಲೆ ಕಾಣುತ್ತಿರುವ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಹುಟ್ಟಿಗೆ ಕಾರಣವಾದ ವಿಕಾಸನೀಯ ಬದಲಾವಣೆಗಳಿಗೆ ವಾತಾವರಣ ಹಾಗೂ ಮಳೆಯ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಬಹುಮುಖ್ಯವಾದ ಪ್ರಭಾವವನ್ನು ಬೀರಿದೆ,” ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ, ಸೆಂಟರ್ ಫಾರ್ ಎಕಲಾಜಿಕಲ್ ಎಕನಾಮಿಕ್ಸ್ ಅಂಡ್ ನ್ಯಾಚುರಲ್ ರಿಸೋಸರ್ಸ್ (ಸಿಇಇಎನ್‌ಆರ್) ಹಾಗೂ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕಲ್ ಚೇಂಜಸ್ (ಐಸೆಕ್), ಬೆಂಗಳೂರು ಸಹಯೋಗದಲ್ಲಿ, ‘ತಾಪಮಾನ ಬದಲಾವಣೆ – ಪರಿಸರವ್ಯವಸ್ಥೆಯ ಪುನರ್‌ಸ್ಥಾಪನೆ ಹಾಗೂ ಸಾಮಾಜಿಕ-ಪರಿಸರವ್ಯವಸ್ಥೆಯ ಸುಸ್ಥಿರತೆ’ (Climate Change – Ecological Restoration and Socio-Ecological Sustainability) ಎಂಬ ವಿಷಯದ ಮೇಲೆ ಇಂದು ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವೆಬಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದರು.

jk

ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಜಿ. ಹೇಮಂತ್ ಕುಮಾರ್ ಅವರು, “ಹಾಲಿ ಜಾಗತಿಕ ತಾಪಮಾನದ ಘಟಕ್ಕೆ ಸರಿಹೊಂದಿಸಿಕೊಳ್ಳುವುದು ಸಸ್ಯಗಳು ಹಾಗೂ ಪ್ರಾಣಿಸಂಕುಲ ಹೊಂದಿಕೊಳ್ಳುವುದು ಬಹಳ ಕಷ್ಟವಾಗಿದೆ, ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಒಂದು ಕಾರಣವೇನೆಂದರೆ ತಾಪಮಾನದಲ್ಲಿ ತೀವ್ರಗತಿಯಲ್ಲಿ ಆಗುತ್ತಿರುವ ಬದಲಾವಣೆ – ಕಳೆದ ೧೦,೦೦೦ ವರ್ಷಗಳ ಹೋಲಿಕೆಯಲ್ಲಿ, ಮುಂದಿನ ಒಂದು ಶತಮಾನದಲ್ಲಿ ಸರಾಸರಿ ಜಾಗತಿಕ ತಾಪಮಾನ ಅತೀ ವೇಗದಲ್ಲಿ ಬದಲಾಗಲಿದೆ. ಭೂಮಿಯ ಮೇಲಿನ ಅನೇಕ ತಳಿಗಳು ಈ ಬದಲಾವಣೆಗೆ ವೇಗವಾಗಿ ಹೊಂದಿಕೊಳ್ಳುವುದು ಸಾಧ್ಯವಾಗುವುದಿಲ್ಲ ಅಥವಾ ಅದರ ಉಳಿವಿಗೆ ಸೂಕ್ತವಾಗಿರುವಂತಹ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದು ಸಾಧ್ಯವಾಗುವುದಿಲ್ಲ. ಕಂಪ್ಯೂಟರ್ ಮಾದರಿಗಳು ಸೂಚಿಸಿರುವ ಪ್ರಕಾರ ೨೧೦೦ರ ವೇಳೆಗೆ ಸರಾಸರಿ ಜಾಗತಿಕ ತಾಪಮಾನ ೧.೪ ರಿಂದ ೫.೮ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಾಗಲಿದೆ. ಈ ಪ್ರಕಾರವಾಗಿ ತಾಪಮಾನ ಬದಲಾವಣೆ ಮುಂದಿನ ಕೆಲವು ದಶಕಗಳಲ್ಲಿ ಬದಲಾವಣೆಯ ಬಹಳ ಪ್ರಮುಖ ವಿಷಯವಾಗಲಿದೆ,” ಎಂದು ವಿವರಿಸಿದರು.

ಹಸಿರು ಕ್ಯಾಂಪಸ್ :

ಇದೇ ವೇಳೆ ಮೈಸೂರು ವಿಶ್ವವಿದ್ಯಾಲಯ ಕೈಗೊಳ್ಳುತ್ತಿರುವ ವಿವಿಧ ಪರಿಸರಸ್ನೇಹಿ ಚಟುವಟಿಕೆಗಳ ಕುರಿತೂ ಸಹ ಮಾತನಾಡಿದರು. “ಮೈಸೂರು ವಿಶ್ವವಿದ್ಯಾಲಯ ‘ಹಸಿರು ಕ್ಯಾಂಪಸ್ ಅಭಿಯಾನ’ವನ್ನು ಕೈಗೊಂಡಿದ್ದು, ಈ ಅಭಿಯಾನದ ಭಾಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ೧೦ ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಜೊತೆಗೆ ಎರಡು ಇ-ವಾಹನಗಳು ಹಾಗೂ ಸೌರಶಕ್ತಿ ದೀಪಗಳನ್ನೂ ಸಹ ಅಳವಡಿಸಲು ಯೋಜಿಸಲಾಗಿದೆ. ಪ್ರಸ್ತುತ ಮಾನಸಗಂಗೋತ್ರಿ ಆವರಣದಲ್ಲಿ ೧೫,೦೦೦ ದೊಡ್ಡ ಹಾಗೂ ೯,೦೦೦ ಚಿಕ್ಕ ಮರಗಳಿವೆ. ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಇದೇ ರೀತಿ ಹಾಸನ, ಮಂಡ್ಯ, ಚಾಮರಾಜನಗರದಲ್ಲಿರುವ ಸ್ನಾತಕೋತ್ತರ ಕೇಂದ್ರಗಳ ಆವರಣದಲ್ಲಿಯೂ ಅಭಿಯಾನವನ್ನು ಕೈಗೊಳ್ಳಲಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಮಳೆ ನೀರನ್ನು ಸಂಗ್ರಹಿಸಲು ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು, ಬೇಸಿಗೆಯಲ್ಲಿ ನೀರಿನ ಬೇಡಿಕೆಯನ್ನು ಸರಿದೂಗಿಸಬಹುದಾಗಿದೆ,” ಎಂದು ವಿವರಿಸಿದರು.

 

ENGLISH SUMMARY : 

 

Climate change is projected to become an increasingly important driver of change in the coming decades: Prof. G. Hemanth Kumar

Mysuru, July 02, 2021  : “The rich variety of life on earth has always had to deal with the changing climate. The need to adapt to new patterns of temperature and rainfall has been a major influence on evolutionary changes that produced the plant and animal species we are seeing today,” explained Prof. G. Hemanth Kumar, Vice-Chancellor, University of Mysore.

jk
He participated in the National Webinar on the topic, “Climate Change – Ecological Restoration and Socio-Ecological Sustainability,” organized by the Department of Environmental Science, University of Mysore, in association with the Centre for Ecological Economics and Natural Resources (CEENR), and Institute for Social and Economical Changes, Bengaluru.
In his presidential address, Prof. G. Hemanth Kumar informed, “There are several reasons why plants and animals are less able to adapt to the current phase of global warming. One is a very rapid pace of change – it is anticipated that over the next century the rise in average global temperatures will be faster than ever in the last 10,000 years. Many species will be unable to adapt quickly to the new conditions or to move to regions more suited for their survival. Computer models predict by an average global temperature increases by 1.4 to 5.8 degrees Centigrade by the year 2100. Thus climate change is projected to become an increasingly important driver of change in the coming decades.”


On the occasion, he also mentioned the various environment-friendly activities undertaken by the University of Mysore. ‘The University of Mysore has undertaken a green campus campaign by planting saplings apart from using two E-vehicles and installing solar lights. The University has also taken measures to plant 10,000 saplings under the Green Campus Campaign. Presently there are an estimated 15,000 large trees and 9,000 small trees on Manasagangotri campus. Students will be involved in the green campus campaign. Similarly, campus planting programs have also been initiated at the Post Graduate centers located at Hassan, Mandya, and Chamarajanagara. Rainwater harvesting method is adopted o store rainwater using modern technology, which will be helpful in meeting the water demand during summer,” he added.
About 360 members participated in the virtual National Webinar.

————–

Keywords: University of Mysore- National Webinar- Climate Change- Prof. G. Hemanth Kumar.