ಶಾಸಕರು ದುಬೈಗೆ ಓಡಿ ಹೋಗುವುದನ್ನ ತಡೆಗಟ್ಟಲು ಕಾಂಗ್ರೆಸ್ ಸಭೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆ.

Promotion

ನವದೆಹಲಿ,ನವೆಂಬರ್,1,2023(www.justkannada.in):  ಶಾಸಕರು ದುಬೈಗೆ ಓಡಿ ಹೋಗುವುದನ್ನ ತಡೆಯಲು ಕಾಂಗ್ರೆಸ್ ನಾಯಕರು ​ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಒಳಬೇಗುದಿ ಕಡಿಮೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಕೆಎಂ ಡಿ.ಕೆ ಶಿವಕುಮಾರ್ ಅವರನ್ನು ಒಂದು ಮಾಡಲು ಸಭೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ,  ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಸರ್ಕಾರದ ಬೊಕ್ಕಸವೂ ಖಾಲಿ ಆಗಿದೆ. ಕೆಲವು ಸಚಿವರು ಇನ್ನು ಮೂರು ಉಪ ಮುಖ್ಯಮಂತ್ರಿಗಳು ಬೇಕು ಎನ್ನುತ್ತಾರೆ. ಇನ್ನು ಕೆಲವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮಗೆ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೇ ಬಿಟ್ಟು ತೊಲಗಿ  ಎಂದು ಕಿಡಿಕಾರಿದರು.

ಉಚಿತ ಪ್ರಯಾಣ ಎಂದು ಬಸ್ ಕಡಿಮೆ ಮಾಡಿದೆ. ಅರ್ಧದಷ್ಟು ಬಸ್ ಸಂಚಾರ ಮಾಡುತ್ತಿಲ್ಲ. ಬಸ್‌ ಗಳ ಡಿಸೇಲ್ ತುಂಬಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಲಕ್ಷ್ಮೀ ಯೋಜನೆ ಮಹಿಳೆಯರಿಗೆ ತಲುಪಿಲ್ಲ. ವಿದ್ಯುತ್ ಉಚಿತ ಅಂತ ಹೇಳಿದ್ರು ಆದರೆ ವಿದ್ಯುತ್ ಇಲ್ಲ. ರೈತರು ವಿದ್ಯುತ್ ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಸರ್ಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಆರ್‌ಡಿ ಪಾಟೀಲ್ ಮತ್ತೆ ಲಂಚ ಪಡೆಯುತ್ತಿದ್ದಾರೆ. ಆದರೆ ಪ್ರಿಯಾಂಕಾ ಖರ್ಗೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಅವ್ಯವಸ್ಥೆಗೆ ಶಾಸಕರು ಹಿಡಿಶಾಪ ಹಾಕುತ್ತಿದ್ದಾರೆ. ಶಾಸಕರ ಗುಂಪುಗಳಾಗುತ್ತಿವೆ, ಇದನ್ನು ತಡೆಯಲು ಹೈಕಮಾಂಡ್ ನಾಯಕರು ಬೆಂಗಳೂರಿಗೆ ತೆರಳಿದ್ದಾರೆ ಕೇಂದ್ರ ಸಚಿವೆ ಎಂದು  ಶೋಭಾ ಕರಂಧ್ಲಾಜೆ ಲೇವಡಿ ಮಾಡಿದರು.

Key words: Union Minister -Shobha Karandlaje- criticizes- Congress -meeting