ಕಾಂಗ್ರೆಸ್ ನಿಂದ ಗ್ಯಾರಂಟಿ ಕಾರ್ಡ್ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆ.

Promotion

ಬೆಂಗಳೂರು,ಮಾರ್ಚ್,21,2023(www.justkannada.in):  ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿರುವ ಕುರಿತು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಪದವೀಧರರಿಗೆ 3 ಸಾವಿರ ಭತ್ಯೆ,  200 ಯುನಿಟ್ ಉಚಿತ ವಿದ್ಯುತ್ , ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡುತ್ತಿದೆ.  ದೇಶದಲ್ಲಿ ಕಾಂಗ್ರೆಸ್ 60ಕ್ಕೂ ಹೆಚ್ಚು ವರ್ಷ ಆಡಳಿತ ಮಾಡಿದೆ. ಆದರೆ ಈಗ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ.  ರಾಜಸ್ತಾನದಲ್ಲೂ ಇದೇ ರೀತಿ ಘೋಷಣೆಗಳನ್ನ ಮಾಡಿದರು. ಮಧ್ಯ ಪ್ರದೇಶದಲ್ಲಿ ದ್ವಿಚಕ್ರವಾಹನ ಕೊಡುವುದಾಗಿ ಘೋಷಿಸಿದ್ರು. ಆದರೆ ಯಾವುದನ್ನೂ ಕಾಂಗ್ರೆಸ್ ಪೂರೈಸಿಲ್ಲ. ರಾಜ್ಯದಲ್ಲೂ ಸಹ ಯಾವುದೇ ಭರವಸೆಗಳನ್ನು ಅವರು ಈಡೇರಿಸುವುದಿಲ್ಲ ಎಂದು ಕಿಡಿಕಾರಿದರು.

ಬಾಬೂರಾವ್ ಚಿಂಚನಸೂರ್ ಬಿಜೆಪಿ ತೊರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಬಾಬೂರಾವ್ ಚಿಂಚನಸೂರ್ ಗೆ ಬಿಜೆಪಿ ಅನ್ಯಾಯ ಮಾಡಿಲ್ಲ. ಅವರನ್ನ ಎಂಎಲ್ ಸಿ ಮಾಡಿತ್ತು. ಕೋಲಿ ಸಮುದಾಯ ಬಿಜೆಪಿ ಜೊತೆ ಇದೆ. ಬಾಬೂರಾವ್ ಚಿಂಚನಸೂರ್ ಏಕೆ ಬಿಜೆಪಿ ತೊರೆದರೆಂದು ಗೊತ್ತಿಲ್ಲ  ಅವರು ಯಾರ ಜತೆ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಅವರಿಗೆ ಗೌರವ ಸ್ಥಾನಮಾನ ಎಲ್ಲವನ್ನ ನೀಡಿದ್ದೇವೆ ಎಂದರು.

Key words: Union Minister -Shobha Karandhlaje- guarantee card – Congress.