ಮೈಸೂರು-ಬೆಂಗಳೂರು ಹೈವೇ ನಾವೇ ಮಾಡಿದ್ದು ಎಂದ ಸಿದ್ಧರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು.

Promotion

ಹಾಸನ,ಮಾರ್ಚ್,9,2023(www.justkannada.in): ಮೈಸೂರು-ಬೆಂಗಳೂರು ಹೈವೇ ನಾವೇ ಮಾಡಿದ್ದು ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಂಗಳೂರು-ಮೈಸೂರು ಹೈವೇ ನಾವೆ ಮಾಡಿದ್ದು ಅಂತಾ ಸಿದ್ಧರಾಮಯ್ಯ ಹೇಳ್ತಾರೆ.   ರಾಜ್ಯದಲ್ಲಿ ಮೋದಿ ಯಾವುದೇ ಉದ್ಘಾಟನೆಗೆ ಬಂದಾಗ ಅದೆಲ್ಲಾ ನಾನೇ ಮಾಡಿದ್ದು ಅಂತಾ ಸಿದ‍್ಧರಾಮಯ್ಯ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ಅವಧಿಯ ಆಡಳಿತದಲ್ಲಿ ಆಧಾರ್ ಬದಲು ನಿರಾಧಾರ ಇತ್ತು ಎಂದು ವ್ಯಂಗ್ಯವಾಡಿದರು.

ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ,  ಮೊದಲಿನಿಂದಲೂ ಲೋಕಸಭೆಯಲ್ಲಿ ನಮಗೆ ಬೆಂಬಲ ನೀಡಿದ್ದಾರೆ. ಬೆಂಬಲ ನೀಡುವಂತೆ ಕೇಳಿದಾಗ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಾಳೇ ಅಧಿಕೃತವಾಗಿ ಬೆಂಬಲ ನೀಡುವ ಬಗ್ಗೆ ಹೇಳಬಹುದು ಅಷ್ಟೆ ಎಂದರು.

Key words: Union Minister -Prahlad Joshi – Siddaramaiah – Congress- period