ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ನಿರ್ಮಾಪಕ ಮತ್ತು ಜನಕರು – ಡಿಕೆಶಿ ಕುಟುಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,

Promotion

ಹಾಸನ.ಮಾರ್ಚ್,9,2023(www.justkannada.in):  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹೇಳಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಡಿಕೆ ಶೀವಕುಮಾರ್ ಜೈಲಿಗೆ ಹೋಗಿದ್ದು ಯಾಕೆ ಎಂದು ಮೊದಲು ಕೇಳಿಕೋಳಲಿ. ಮನೆಯಲ್ಲಿ ಅಪಾರ ಪ್ರಮಾಣದ ಹಣ ಸಿಕ್ಕಿದ್ದೇಗೆ..?  ಡಿಕೆ ಶಿವಕುಮಾರ್ ರಾಜಕೀಯಕ್ಕೆ ಬರುವ ಮುನ್ನ ಅಸ್ತಿ ಹಣ ಎಷ್ಟಿತ್ತು.  ಈಗ  ಆಸ್ತಿ ಹಣ ಎಷ್ಟಿದೆ ಎಂಬುದರ ಲೆಕ್ಕ ತೆಗೆಯಲಿ.  ಭ್ರಷ್ಟಚಾರದ ನಿರ್ಮಾಪಕರೇ ಕಾಂಗ್ರೆಸ್ ನವರು.  ಬಿಜೆಪಿ ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್ ಎಂದು ಕಿಡಿಕಾರಿದರು.

Key words:  Union Minister- Prahlad Joshi- – DK shivakumar-corruption.’