ಡಿ.30ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ.

Promotion

ಮಂಡ್ಯ,ಡಿಸೆಂಬರ್,24,2022(www.justkannada.in):  ಹಾಲು ಒಕ್ಕೂಟದ ಕಟ್ಟಡ ಉದ್ಘಾಟನೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸೆಂಬರ್ 30ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಸೆಂಬರ್  30ರಂದು ಬೆಳಿಗ್ಗೆ ಮಂಡ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ  ಅಂದು ಬೆಳಿಗ್ಗೆ 11 ಗಂಟೆಗೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ  ಮೇಗಾಡೈರಿ ಉದ್ಘಾಟನೆ ಮಾಡಲಿದ್ದಾರೆ.

ಅಂದು  ನಡೆಯುವ ಸಮಾವೇಶಕ್ಕೆ 1 ಲಕ್ಷ ಜನರನ್ನ ಸೇರಿಸಲು ಬಿಜೆಪಿ ಪ್ಲಾನ್ ರೂಪಿಸಿದ್ದು ಅಂದು  ಬೃಹತ್ ಸಮಾವೇಶ ಉದ್ಧೇಶಿಸಿ ಕೇಂದ್ರ ಸಚಿವ ಅಮಿತ್ ಶಾ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.

Key words: Union Home Minister -Amit Shah –visit- Mandya – December 30.