‘ಪ್ರಜಾಕೀಯ ಇನ್ನೂ ಅರ್ಥವಾಗದವರಿಗೆ’ : ನಟ ರಿಯಲ್ ಸ್ಟಾರ್ ಉಪೇಂದ್ರ ಕೊಟ್ಟ ಸಂದೇಶವಿದು…

Promotion

ಬೆಂಗಳೂರು,ಫೆಬ್ರವರಿ,27,2021(www.justkannada.in);  ಪ್ರಜಾಕೀಯದ ಬಗ್ಗೆ ಇನ್ನೂ ಅರ್ಥವಾಗದವರಿಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರು ಸಂದೇಶವೊಂದನ್ನ ನೀಡಿದ್ದಾರೆ.jk

‘ಪ್ರಜಾಕೀಯ ಇನ್ನೂ ಅರ್ಥವಾಗದವರಿಗೆ… “ನನಗೂ ದೇವರು ಬುದ್ದಿಶಕ್ತಿ ಕೊಟ್ಟಿದ್ದಾನೆ, ನನ್ನ ಹಣವೇ ಸರ್ಕಾರದ ಹಣ, ಸರ್ಕಾರದಲ್ಲಿ ಕೆಲಸ ಮಾಡುವವರೆಲ್ಲರಿಗೂ ನಾನೇ ಸಂಬಳ ಕೊಡುವುದು, ನನ್ನ ಹಣದ ಬಗ್ಗೆ ನನಗೆ ಪಾರದರ್ಶಕತೆಯಿಂದ, ಜವಾಬ್ದಾರಿ ಹೊತ್ತು ಪ್ರತಿ ಪೈಸೆಗೂ ಲೆಕ್ಕ ಕೊಡುವ ಮತ್ತು ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು ಕೆಲಸ ಮಾಡುವ ಕೆಲಸಗಾರರು ಮಾತ್ರ ನನಗೆ ಬೇಕಿರುವುದು ಎಂದು ನಟ ಉಪೇಂದ್ರ ಹೇಳಿದ್ದಾರೆ.understand-prajakiya-message-actor-real-star-upendra

ಇನ್ನು ನಾನು ಆ ರಾಜ್ಯದ ಮಾಡೆಲ್ ಈ ರಾಜ್ಯದ ಮಾಡೆಲ್ ಆ ನಾಯಕ ಹೀಗೆ ಮಾಡಿದ ಈ ನಾಯಕ ಹೀಗೆ ಮಾಡುತ್ತಾನೆ ಎಂಬ ಆಶ್ವಾಸನೆಗೆ ಬಲಿಯಾಗುವುದಿಲ್ಲ.  ಇನ್ನು ಮುಂದೆ ಜನ ಸರಿ ಇಲ್ಲ ಎಂಬ ನೆಗೆಟೀವ್ ಮನಸ್ಥಿತಿಯಿಂದ ಹೊರಬರುತ್ತೇನೆ. ನಾನು ಸರಿ ಹೋದರೆ ಜನ ಸರಿಯಾದಂತೆ ಎಂಬ ಸಾಮಾನ್ಯ ಜ್ಞಾನ ನನಗಿದೆ.  ಇದೇ ಪ್ರಜಾಕೀಯ ! ಇದು ಓದುತ್ತಿರುವ ನಿನಗೆ ಮಾತ್ರ ! ಎಂದು ಹೇಳಿದ್ದಾರೆ.

Key words: understand –prajakiya-message – actor- Real Star -Upendra.