ಕಾಂಗ್ರೆಸ್ ಜೊತೆ ಸೇರಿ ಉದ್ಧವ್ ಠಾಕ್ರೆ ಸರ್ಕಾರ ಮಾಡಿದ್ದೇ ಅಪರಾಧ- ಸಚಿವ ಗೋವಿಂದ ಕಾರಜೋಳ.

Promotion

ಬೆಳಗಾವಿ, ಜೂನ್,27,2022(www.justkannada.in): ಕಾಂಗ್ರೆಸ್ ಜೊತೆ ಸೇರಿ ಉದ್ಧವ್ ಠಾಕ್ರೆ ಸರ್ಕಾರ ಮಾಡಿದ್ದೇ ಅಪರಾಧ. ಉದ್ಧವ್ ಠಾಕ್ರೆ ಅಧಿಕಾರದ ಆಸೆಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಶಾಸಕರು ಬಂಡಾಯ ಎದ್ಧಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ ಸಿದ‍್ಧಾಂತ ಇಲ್ಲದ  ಪಕ್ಷ. ಆದರೂ ಸಹ ಅವರ ಜೊತೆ ಕೈ ಜೋಡಿಸಿದರು. ಶಿವಸೇನೆ ಕಾಂಗ್ರೆಸ್ ಹೊಂದಾಣಿಕೆಯಾಗಲ್ಲ. ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ಮೂರಬಟ್ಟೆ ಸರ್ಕಾರ ರಚಿಸಿದರು. ಈಗ ಮಹಾರಾಷ್ಟ್ರದಲ್ಲಿರುವುದ ಮೂರಾಬಟ್ಟೆ ಸರ್ಕಾರ ಎಂದು ಟೀಕಿಸಿದರು.

ಕಾಂಗ್ರೆಸ್ ಶಿವಸೇನೆಗೆ ಎಂದೂ ಹೊಂದಾಣಿಕೆಯಾಗಲ್ಲ. ನೀರಿಗೆ ಎಣ್ಣೆ ಸೇರಿಸಿದಂತೆ ಆಗಿದೆ. ಅಧಿಕಾರದ ಆಸೆಗೆ ಕಾಂಗ್ರಸ್ ಜೊತೆ ಸೇರಿ ಉದ್ಧವ್ ಸರ್ಕಾರ ಮಾಡಿದ್ಧೆ ಅಪರಾಧ ಎಂದರು.

Key words: Uddhav Thackeray- government – alliance – Congress-Minister-Govinda Karajola.