ಶಿವಮೊಗ್ಗದಲ್ಲಿ ಎರಡು ಗಂಟೆ ಅಂತರದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ.

Promotion

 

ಶಿವಮೊಗ್ಗ,ಆಗಸ್ಟ್,15,2022(www.justkannada.in):  ವಿ.ಡಿ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫ್ಲೆಕ್ಸ್ ವಿವಾದದ ನಡುವೆಯೇ  ಶಿವಮೊಗ್ಗದಲ್ಲಿ ಎರಡು ಗಂಟೆ ಅಂತರದಲ್ಲಿ ಇಬ್ಬರು ಯವಕರಿಗೆ ಚಾಕು ಇರಿದಿರುವ ಘಟನೆ ನಡೆದಿದೆ.

ಶಿವಮೊಗ್ಗದ ಉಪ್ಪಾರಕೇರಿ ಬಡಾವಣೆಯಲ್ಲಿ  ಮನೆ ಮುಂದೆ ನಿಂತಿದ್ಧ ಪ್ರೇಮ್ ಸಿಂಗ್ ಎನ್ನುವವರಿಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.  ಘಟನೆ ಬಳಿಕ ದುಷ್ಕರ್ಮಿಗಳು  ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ . ಗಾಯಾಳು ಪ್ರೇಮ್ ಸಿಂಗ್ ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತೊಂದು ವ್ಯಕ್ತಿಗೆ ಚಾಕು ಇರಿಯಲಾಗಿದೆ. ಅಶೋಕನಗರದಲ್ಲಿ ಪ್ರವೀಣ್(27) ಎಂಬ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಗಾಂಧಿ ಬಜಾರ್ ನಲ್ಲಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಚಾಕು ಇರಿಯಲಾಗಿದೆ.

ಇನ್ನು ಶಿವಮೊಗ್ಗದಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುತ್ತಿದ್ದು  ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

Key words: Two -youths –assult- stabbed – Shimoga