ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದಾರೆ : ಮೈಸೂರು ಭಾಗಕ್ಕೆ ಈ ಬಾರಿಯಾದ್ರೂ ಸಚಿವ ಸ್ಥಾನ ನೀಡಿ- ಶಾಸಕ ಎಲ್. ನಾಗೇಂದ್ರ ಆಗ್ರಹ…

Promotion

ಮೈಸೂರು,ಸೆಪ್ಟಂಬರ್,17,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿದ್ದು ರಾಜ್ಯ ಸಂಪುಟ ವಿಸ್ತರಣೆ ಕುರಿತು ಪ್ರಧಾನಿ ಮೋದಿ ,ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆ ವೇಳೆ ಮೈಸೂರು ಭಾಗಕ್ಕೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಿ ಎಂದು ಬಿಜೆಪಿ ಶಾಸಕ ಎಲ್ ನಾಗೇಂದ್ರ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಶಾಸಕ ಎಲ್. ನಾಗೇಂದ್ರ, ನಾವು ನಿರೀಕ್ಷೆ ಮಾಡುತ್ತಿಲ್ಲ ನಮಗೂ ಆಸೆ ಇದೆ. ಮೈಸೂರಿನಿಂದ ಇಬ್ಬರು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಎಚ್.ವಿಶ್ವನಾಥ್ ಮತ್ತು ಎಸ್.ಎ.ರಾಮದಾಸ್ ಇಬ್ಬರಲ್ಲಿ ಯಾರಿಗೆ ಸ್ಥಾನ ಕೊಟ್ಟರು ಸ್ವಾಗತ ಮಾಡುತ್ತೇನೆ ಹೀಗಾಗಿ ಮೈಸೂರು ಭಾಗಕ್ಕೆ ಈ ಬಾರಿಯಾದ್ರೂ ಸಚಿವ ಸ್ಥಾನ ನೀಡಿ ಎಂದು ಸಿಎಂ ಮತ್ತು ಬಿಜೆಪಿ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.two-strong-aspirants-mysore-ministerial-position-mla-l-nagendra

ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ದಸರಾ ಒಳಗೆ ಸಂಪುಟ ವಿಸ್ತರಣೆ ಆದರೆ ಉತ್ತಮ. ಮೈಸೂರಿನಿಂದ ಯಾರು ಮಂತ್ರಿ ಆಗುತ್ತಾರೋ ಅವರೇ ಮೈಸೂರು ಜಿಲ್ಲಾ ಉಸ್ತುವಾರಿ. ಅದು ವಿಶ್ವನಾಥೇ ಆಗಿರಲಿ ಅಥವಾ ರಾಮದಾಸೇ ಆಗಿರಲಿ ಎಂದು ಶಾಸಕ ಎಲ್ ನಾಗೇಂದ್ರ ಹೇಳಿದರು.

Key words:  two strong- aspirants-Mysore – ministerial –position-MLA-L.Nagendra