ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನವೇ ಹೊರನಡೆದ ಇಬ್ಬರು ಶಾಸಕರು.

Promotion

ಬೆಂಗಳೂರು,ನವೆಂಬರ್,17,2023(www.justkannada.in):  ವಿಪಕ್ಷ ನಾಯಕನ ಆಯ್ಕೆ ಕುರಿತು ಇಂದು ವೀಕ್ಷಕರ ತಂಡ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಶಾಸಕಾಂಗ ಸಭೆ ನಡೆಸುತ್ತಿದ್ದು ಆದರೆ ಸಭೆಗೂ ಮುನ್ನವೇ ಇಬ್ಬರು ಶಾಸಕರು ಹೊರನಡೆದಿದ್ದಾರೆ.

ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು ಶಾಸಕರ ಜೊತೆ ಚರ್ಚಿಸಿ ವೀಕ್ಷಕರ ತಂಡ ಅಭಿಪ್ರಾಯ ಸಂಗ್ರಹಿಸಿ ನಂತರ ದೆಹಲಿಗೆ ತೆರಳಿ ವಿಪಕ್ಷ ನಾಯಕರ ಹೆಸರನ್ನ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಮಧ್ಯೆ ಈಗಾಗಲೇ ಅಸಮಾಧಾನಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಸಭೆಗೂ ಮುನ್ನವೇ ಹೊರನಡೆದಿದ್ದಾರೆ. ಇಬ್ಬರು ಶಾಸಕರು ಒಂದೇ ಕಾರಿನಲ್ಲಿ ತೆರಳಿದ್ದಾರೆ.

ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಬಡವರು ಟೀ ಕುಡಿಯುವ ಜಾ‍ಗ ಇದಲ್ಲ. ಟೀ ಕುಡಿಯೋಕೆ ಹೊರ ಹೋಗುತ್ತಿದ್ದೇನೆ ಎಂದರು.

Key words: two MLAs -walked out -before -start – BJP –legislative-meeting