ಮೈಸೂರಿನಲ್ಲಿ  ಪತ್ತೆಯಾಯ್ತು ‘ಗಜ’ನಿಂಬೆ.

Promotion

ಮೈಸೂರು,ಆಗಸ್ಟ್,12,2021(www.justkannada.in):  ನಿಂಬೆಹಣ್ಣನ್ನ ನೋಡಿದರೇ ಗಾತ್ರದಲ್ಲಿ ಚಿಕ್ಕದಾಗಿ, ತೂಕವೂ ಕಡಿಮೆ ಇರುತ್ತದೆ. ಈ ಮಧ್ಯೆ ಬರೊಬ್ಬರಿ 2 ಕೆ.ಜಿ ತೂಕದ ಬೃಹತ್ ಗಾತ್ರದ ನಿಂಬೆ ಹಣ್ಣು ಮೈಸೂರಿನಲ್ಲಿ ಪತ್ತೆಯಾಗಿದ್ದು ನಿಂಬಹಣ್ಣನ್ನ ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ಬಿದರಹಳ್ಳಿ ಸರ್ಕಲ್‌ ಬಳಿ ಬೇಕರಿ ಮಾಲೀಕರ ಮನೆಯಲ್ಲಿ ಪತ್ತೆಯಾಗಿದೆ. ಬೇಕರಿ ಮಾಲೀಕ ಸನೋಜ್ ಅವರ ಹಿತ್ತಲಿನಲ್ಲಿ ಅಪರೂಪದ ನಿಂಬೆಗಿಡ ಬೆಳೆದಿದ್ದು, ಈ ಗಿಡದಲ್ಲಿ 3 ನಿಂಬೆ ಹಣ್ಣುಗಳನ್ನು ಬಿಟ್ಟಿದೆ. ಆದರೆ ಒಂದರ ಗಾತ್ರ ಮಾತ್ರ ಬರೋಬ್ಬರಿ 2ಕೆಜಿ‌ 150 ಗ್ರಾಂನಷ್ಟು ಇದೆ.

ಈ ಅಧಿಕ ತೂಕವಿರುವ ಅಪರೂಪದ ನಿಂಬೆ ಹಣ್ಣನ್ನು ನೋಡಿ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಈ ನಿಂಬೆ ಹಣ್ಣಿನ ಗಿಡದಲ್ಲಿ ಇನ್ನೂ 2 ನಿಂಬೆ ಹಣ್ಣಿನ ಕಾಯಿಗಳಿವೆ. ಇದನ್ನ ಗಾತ್ರ ಬರುವವರೆಗೂ ಈ ನಿಂಬೆಕಾಯಿಗಳನ್ನು ಕಾವಲಿದ್ದು ನೋಡಿಕೊಳ್ತಾರಂತೆ ಸನೋಜ್. ಸದ್ಯ ಕೃಷಿ ಇಲಾಖೆ ತಜ್ಞರು ಇಂತಹ ಗಜನಿಂಬೆ ಕಾಯಿ ಗಿಡವನ್ನ ಪೋಷಿಸಿ ಎನ್ನುತ್ತಿದ್ದಾರೆ ಸ್ಥಳೀಯರು.

Key words: Two kg – lemons- found –Mysore-Surprised- people.