ಹೊಳೆಗೆ ಕಾರು ಬಿದ್ದು ಕೊಚ್ಚಿಹೊಗಿದ್ದ ಇಬ್ಬರ ಮೃತದೇಹ ಪತ್ತೆ.

Promotion

ಮಂಗಳೂರು,ಜುಲೈ,12,2022(www.justkannada.in): ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದ ಇಬ್ಬರ  ಮೃತದೇಹ ಇಂದು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಬಳಿ ಜುಲೈ 10ರ ತಡರಾತ್ರಿ ವೇಗವಾಗಿ ಬಂದಿದ್ದ ಕಾರು ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದಿತ್ತು. ಬಂಟ್ವಾಳ ತಾಲೂಕಿನ ಕುಂಡಡ್ಕ ಗ್ರಾಮದ ಧನುಷ್(25) ಹಾಗೂ ಕನ್ಯಾನ ಗ್ರಾಮದ ಧನುಷ್(26)  ಮೃತಪಟ್ಟವರು.

ಕಳೆದ ಎರಡು ದಿನಗಳಿಂದ ಇಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿತ್ತು. ಇದೀಗ ಇಂದು ಕಾರು ಬಿದ್ದ ಸ್ಥಳದಿಂದ 250 ಮೀ. ದೂರದಲ್ಲಿ ಇಬ್ಬರ ಶವ ಪತ್ತೆಯಾಗಿದೆ.

Key words: two -dead bodies -found – car -fell – river-dakshina kannada