ಮೈಸೂರಿನಲ್ಲಿ ಇಬ್ಬರು ಸರಗಳ್ಳರ ಬಂಧನ:  11.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪೊಲೀಸರ ವಶಕ್ಕೆ…

Promotion

ಮೈಸೂರು,ನವೆಂಬರ್,19,2022(www.justkannada.in): ಮೋಜು ಮಸ್ತಿಗಾಗಿ  ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನ ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿ ಚಿನ್ನಾಭರಣ, ಬೈಕ್ ಮತ್ತು ಮೊಬೈಲ್ ಅನ್ನ ವಶಕ್ಕೆ ಪಡೆದಿದ್ದಾರೆ.

ಸಂತೋಷ್(23) ಹಾಗೂ ದರ್ಶನ್(20) ಬಂಧಿತ ಸರಗಳ್ಳರು. ಬಂಧಿತ ಆರೋಪಿಗಳಿಂದ 11.75. ಲಕ್ಷ ಮೌಲ್ಯದ 235 ಗ್ರಾಂ ತೂಕದ 5 ಚಿನ್ನದ ಸರ, 3 ಲಕ್ಷ ಮೌಲ್ಯದ ಮೂರು ಬೈಕ್ ಗಳು ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳಿಬ್ಬರು ಫಾರ್ಮೆಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಇಬ್ಬರು ಮೋಜುಮಸ್ತಿಗಾಗಿ ಸಾಕಷ್ಟು ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ತೀರಿಸುವ ಸಲುವಾಗಿ ಇಬ್ಬರು ಆರೋಪಿಗಳು ಸರಗಳ್ಳತನಕ್ಕೆ ಇಳಿದಿದ್ದರು.

ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಷಣ್ಮುಗವರ್ಮ ಮತ್ತು ತಂಡದಿಂದ ಈ ಕಾರ್ಯಾಚರಣೆ ನಡೆದಿದೆ. ಕುವೆಂಪುನಗರ ಠಾಣೆಯ ನಾಲ್ಕು ಹಾಗೂ ಕೆ.ಆರ್.ಪೊಲೀಸ್ ಠಾಣೆಯಲ್ಲಿ 1 ಸರಗಳುವು ಪ್ರಕರಣ ಪತ್ತೆಯಾಗಿದೆ.

Key words: Two -chain thieves -arrested – Mysore.