ವಿಶ್ವಕಪ್ ಕ್ರಿಕೆಟ್: ಟ್ವಿಟ್ಟರ್’ನಲ್ಲಿ ಸಾನಿಯಾ ಮಿರ್ಜಾ-ವೀಣಾ ಮಲಿಕ್ ಜಟಾಪಟಿ

Promotion

ಇಸ್ಲಮಾಬಾದ್, ಜೂನ್ 18, 2019 (www.justkannada): ಟ್ವಿಟ್ಟರ್ ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ನಟಿ ವೀಣಾ ಮಲಿಕ್ ನಡುವೆ ಜಟಾಪಟಿ ನಡೆದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಿಶ್ವಕಪ್ ಪಂದ್ಯದಲ್ಲೂ ಭಾರತ ಜಯ ಗಳಿಸಿತ್ತು. ಇತ್ತಂಡಗಳ ಕದನಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಶೀಶ ಕೆಫೆಯಲ್ಲಿ ಕಾಣಸಿಕ್ಕಿದ್ದು ಪಾಕ್ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ ನಲ್ಲಿ ನಡೆದಿದ್ದ ಭಾರತ-ಪಾಕ್ ಪಂದ್ಯದಲ್ಲಿ ಭಾರತ 89 ರನ್ ವಿಜಯವನ್ನಾಚರಿಸದ ಬಳಿಕ ಪಾಕ್ ಕ್ರಿಕೆಟಿಗರು ಶೀಶ ಕೆಫೆಯಲ್ಲಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಸಂಬಂಧ ಪಾಕ್ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಪತ್ನಿ ಸಾನಿಯಾ ಮಿರ್ಝಾ ಮತ್ತು ಪಾಕ್ ನಟಿ ವೀಣಾ ಮಲ್ಲಿಕ್ ಮಧ್ಯೆ ಟ್ವಿಟರ್ ಜಟಾಪಟಿ ನಡೆದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಫೋಟೋ ಕುರಿತು ಟ್ವೀಟ್ ಮಾಡಿದ್ದ ವೀಣಾ ಮಲಿಕ್, ಈ ರೀತಿ ನೀನು ಮಾಡಿದ್ದು ಸರಿಯಲ್ಲ. ಕ್ರೀಡಾಪಟುಗಳಿಗೆ ಶೀಶ ಕೆಫೆ ಒಳ್ಳೆಯದಲ್ಲ. ನೀನೂ ಒಬ್ಬಳು ಕ್ರೀಡಾಪಟು, ಮಗುವಿನ ತಾಯಿ ಅನ್ನೋದನ್ನು ನೀನು ಅರಿತುಕೊಳ್ಳಬೇಕು’ ಎಂದು ಬರೆದುಕೊಂಡಿದ್ದರು.

ಇದಕ್ಕೆ ಖಾರವಾಗೇ ಪ್ರತಿಕ್ರಿಯಿಸಿರುವ ಭಾರತದ ಟೆನಿಸ್ ತಾರೆ ಸಾನಿಯಾ, ‘ವೀಣಾ, ನನ್ನ ಮಗುವನ್ನು ನಾನು ಶೀಶಾ ಕೆಫೆಗೆ ಕರೆದೊಯ್ದಿಲ್ಲ. ಆದರೂ ಇದು ನಿನಗಾಗಲೀ ಬೇರೆ ಯಾರಿಗಾಗಲೀ ಸಂಬಂಧಿಸಿದ ವಿಚಾರವೇ ಅಲ್ಲ. ಇದು ನನ್ನ ವೈಯಕ್ತಿಯ ವಿಚಾರ. ಪಾಕ್ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸಲು ನಾನೇನು ಅವರ ತಾಯಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.