ಟ್ವಿಟ್ಟರ್ ಹ್ಯಾಂಡಲ್ ಪಟ್ಟಿ ಬಿಡುಗಡೆ: ಸೋನಾಕ್ಷಿ ಸಿನ್ಹಾ ನಂಬರ್ 1 !

ಮುಂಬೈ, ಡಿಸೆಂಬರ್ 11, 2019 (www.justkannada.in): ಟ್ವಿಟ್ಟರ್ ಇಂಡಿಯಾ ಈ ವರ್ಷ ಅತಿ ಹೆಚ್ಚು ಬಳಿಕೆ ಮಾಡಿದ ಹ್ಯಾಂಡಲ್ ಪಟ್ಟಿ ಬಿಡುಗಡೆ ಮಾಡಿದೆ.

ಈ ಪೈಕಿ ಟಾಪ್ 10 ಮಹಿಳಾ ಸೆಲೆಬ್ರಿಟಿಗಳ ಹೆಸರು ಹೀಗಿದೆ. ನಟಿ ಸೋನಾಕ್ಷಿ ಸಿನ್ಹಾ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ‘ದಬಾಂಗ್ 3’ ಸಿನಿಮಾದ ನಾಯಕಿಯ ಹ್ಯಾಂಡಲ್ ಅನ್ನು ಈ ವರ್ಷ ಅತಿ ಹೆಚ್ಚು ಬಳಿಕೆ ಮಾಡಲಾಗಿದೆ. ಅಂದಹಾಗೆ, ಸೋನಾಕ್ಷಿ ಟ್ವಿಟ್ಟರ್ ನಲ್ಲಿ 14.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ನಂಬರ್ 2 ರಲ್ಲಿ ಅನುಷ್ಕಾ ಶರ್ಮಾ, 3ರಲ್ಲಿ ಲತಾ ಮಂಗೇಶ್ಕರ್, 4ರಲ್ಲಿ ಅರ್ಚನಾ ಕಲ್ಪತಿ, 5 ಪ್ರಿಯಾಂಕಾ ಚೋಪ್ರಾ, 6 ಆಲಿಯಾ ಭಟ್, 7 ಕಾಜಲ್ ಅಗರ್ವಾಲ್, 8 ಸನ್ನಿ ಲಿಯೋನ್, 9 ಮಾಧುರಿ ದೀಕ್ಷಿತ್, 10 ರುಕುಲ್ ಪ್ರೀತ್ ಸಿಂಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸೌತ್ ನಟಿಯರ ಪೈಕಿ ಕಾಜಲ್ ಅಗರ್ವಾಲ್ ಹಾಗೂ ರಕುಲ್ ಪ್ರೀತ್ ಸಿಂಗ್ ಮಾತ್ರ ಟ್ವಿಟ್ಟರ್ ನ ಈ ಪಟ್ಟಿಯಲ್ಲಿ ಇದ್ದಾರೆ.