ಪ್ರಬಲ ಭೂಕಂಪಕ್ಕೆ ತತ್ತರಿಸಿದ ಟರ್ಕಿ, ಸಿರಿಯಾ : 4 ಸಾವಿರಕ್ಕೂ ಹೆಚ್ಚು ಜನರ ಸಾವು: ಭಾರತದಿಂದ ನೆರವು.

ಟರ್ಕಿ,ಫೆಬ್ರವರಿ,7,2023(www.justkannada.in): ಟರ್ಕಿ ಮತ್ತು ಸಿರಿಯಾ ಪ್ರಬಲ ಭೂಕಂಪನದಿಂದ ತತ್ತರಿಸಿದ್ದು  4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.  ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ.

ಭೂಕಂಪನದಿಂದಾಗಿ 7 ಸಾವಿರ ಜನರಿಗೆ ಗಾಯಗಳಾಗಿದ್ದು  ಸಾವಿರಾರು ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಸಾಕಷ್ಟು ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಮತ್ತು ಸಿರಿಯಾ ಭೂಕಂಪನದಲ್ಲಿ ಮೃತಪಟ್ಟವರಿಗೆ  ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ನಡುವೆ ಟರ್ಕಿಗೆ ಭಾರತ ನೆರವಿನ ಹಸ್ತ ಚಾಚಿದ್ದು  ಪರಿಹಾರ ಸಾಮಾಗ್ರಿ ಪೂರೈಸಿದೆ ಎನ್ನಲಾಗಿದೆ. 2020 ರ ಜನವರಿಯಲ್ಲಿ ಮತ್ತೊಂದು ದೊಡ್ಡ ಭೂಕಂಪದಿಂದ ಟರ್ಕಿಯು ಅಪ್ಪಳಿಸಿತ್ತು, ಇದು 6.7 ರ ತೀವ್ರತೆಯು ದೇಶದ ಪೂರ್ವ ಭಾಗದಲ್ಲಿ ಗಮನಾರ್ಹ ಹಾನಿಯನ್ನುಂಟುಮಾಡಿತು. 1999 ರಲ್ಲಿ, ಇಸ್ತಾನ್‌ಬುಲ್ ಬಳಿ 7.4 ತೀವ್ರತೆಯ ಭೂಕಂಪ ಸಂಭವಿಸಿತು ಮತ್ತು ಅಂದಾಜು 18,000 ಜನರು ಸಾವನ್ನಪ್ಪಿದರು.

Key words: Turkey – earthquake- Syria- 4 thousand –people- died