ತುಮಕೂರು ಮೂವರ ಸಾವಿಗೆ ಸರ್ಕಾರದ ವೈಪಲ್ಯವೇ ಕಾರಣ- ಡಿ.ಕೆ ಶಿವಕುಮಾರ್ ವಾಗ್ದಾಳಿ.

Promotion

ಬೆಂಗಳೂರು,ನವೆಂಬರ್,5,2022(www.justkannada.in):  ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೂವರ ಸಾವಿಗೆ ಸರ್ಕಾರ ವೈಪಲ್ಯವೇ ಕಾರಣ. ಸರ್ಕಾರಕ್ಕೆ ಮಾನವೀಯತೆ ಇಲ್ಲ. ಕಣ್ಣು, ಕಿವಿ, ಹೃದಯ, ಏನು ಇಲ್ಲ, ಎಂದು ಕಿಡಿಕಾರಿದರು.

ಇಡಿ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಇಡಿ ಅಧಿಕಾರಿಗಳು ಮತ್ತೆ ನೋಟೀಸ್ ನೀಡಿದ್ದಾರೆ ಈ ಹಿಂದೆಯೇ ಇಡಿಗೆ ಮಾಹಿತಿ ಕೊಟ್ಟಿದ್ದೇವೆ. ಈಗ ಇಡಿ ತನಿಖಾಧಿಕಾರಿಗಳು ಬದಲಾಗಿದ್ದಾರಂತೆ . ಹೀಗಾಗಿ ನೋಟಿಸ್ ನೀಡಿದ್ದಾರೆ. ಕೆಲವು ದಾಖಲೆಗಳನ್ನ ಕೊಡುತ್ತೇವೆ.  ಪದೇ ಪದೇ ಕರೆದು ಇಡಿ ಹಿಂಸೆ ಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Tumkur -three –death-government- negligence-D.K Shivakumar