25 ವರ್ಷದ ಯುವತಿ ವಿವಾಹವಾಗಿ ಸಾಕಷ್ಟು ವೈರಲ್ ಆಗಿದ್ಧ  47 ವರ್ಷದ ಶಂಕರಪ್ಪ ಆತ್ಮಹತ್ಯೆ.

Promotion

ತುಮಕೂರು,ಮಾರ್ಚ್,29,2022(www.justkannada.in): 25 ವರ್ಷ ಯುವತಿ ವಿವಾಹವಾಗಿ ಸಾಕಷ್ಟು ವೈರಲ್ ಆಗಿದ್ಧ  47 ವರ್ಷದ ಶಂಕರಪ್ಪ  ಇದೀಗ ಕುಟುಂಬ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಪ್ಪ ಹೊಲದಲ್ಲಿ ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ  ಶರಣಾಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಶಂಕರಪ್ಪ 25 ವರ್ಷದ ಮೇಘನಾ ಎಂಬ ಯುವತಿಯನ್ನು ವರಿಸಿದ್ದರು. ಈ ನವ ಜೋಡಿಗಳ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಈ ಜೋಡಿಗೆ ಶುಭಹಾರೈಸಿದ್ದರು. ಆದರೆ ಐದೇ ತಿಂಗಳಿಗೆ ವಿವಾಹ ಶಂಕರಣ್ಣನ ಸಾವಿನಿಂದಾಗಿ ದುರಂತ ಅಂತ್ಯ ಕಂಡಿದೆ.

ಶಂಕರಪ್ಪ ಆತ್ಮಹತ್ಯೆಗೆ ಕುಟುಂಬ ಕಲಹವೇ ಕಾರಣ ಎನ್ನಲಾಗುತ್ತಿದೆ. ಅತ್ತೆ ಜೊತೆ ವಾಸಿಸಲು ಮೇಘನಾ ವಿರೋಧಿಸಿದ್ದಳು.  ತಾಯಿ ಜೊತೆ ವಾಸ ಬೇಡ ಬೇರೆ ಹೋಗೋಣ ಎಂದು ಪತಿಗೆ ಮೇಘನಾ ಕಾಟ ಕೊಡುತಿದ್ದಳು ಎನ್ನಲಾಗಿದೆ. ಆದರೆ ನಾನು ತಾಯಿ ಬಿಟ್ಟು ಬರಲ್ಲ  ಹೀಗೆ ಕಾಟಕೊಡುತ್ತಿದ್ದರೇ ಸಾಯುವುದಾಗಿ ಶಂಕರಪ್ಪ ಹೇಳುತ್ತಿದ್ದರು ಎನ್ನಲಾಗಿದೆ. ಈ ನಡುವೆ  ನಿನ್ನೆ  ಪತ್ನಿ ಜತೆ ಮಾತಿಗೆ ಮಾತು ಬೆಳೆದಿದ್ದು ಬೇಸತ್ತ ಶಂಕರಪ್ಪ ಹೊಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Key words: tumkur- commits- suicide