‘ಕೈ’ ಶಾಸಕ ಹೊಗಳಿದ್ದಕ್ಕೆ ಫುಲ್ ಖುಷ್: ಆರೋಪ ಮಾಡುತ್ತಿದ್ದಂತೆ ಗರಂ ಆದ ಸಿಎಂ ಬಿಎಸ್ ಯಡಿಯೂರಪ್ಪ…

Promotion

ತುಮಕೂರು,ಅ,18,2019(www.justkannada.in):  ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಅವರನ್ನ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾಡಿಹೊಗಳಿದ ಘಟನೆ ನಡೆಯಿತು.

ಇಂದು ತುಮಕೂರಿನ ಎಡೆಯೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಉಪಸ್ಥಿತರಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ಚಿಕ್ಕಂದಿನಿಂದಲೂ ಬಿಎಸ್  ವೈ ಹೋರಾಟ ನೋಡಿಕೊಂಡು ಬೆಳೆದಿದ್ದೇನೆ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ. ಕರ್ನಾಟಕಕ್ಕೆ ಸಿಎಂ ಬಿಎಸ್ ವೈ ನೇರ ನಿಷ್ಟುರವಾದಿ ಆದರೆ ಸ್ವಲ್ಪ ಮುಂಗೋಪಿ.  ಅವರ ರೈತಪರ ಹೋರಾಟ ನೋಡಿದ್ದೇನೆ ಎಂದು ಶ್ಲಾಘಿಸಿದರು.

ರಾಜಕೀಯ ಎನ್ನುವುದು ಚುನಾವಣೆಗೆ ಮಾತ್ರ ಸೀಮಿತವಾಗಲಿ. ಅಭಿವೃದ್ದಿಗೆ ರಾಜಕೀಯ ಬೇಡ ಎಂದ ಶಾಸಕ ರಂಗನಾಥ್, ಸಿಎಂ ಹೆಚ್. ಡಿ ಕುಮಾರಸ್ವಾಮಿ ಅವಧಿಯಲ್ಲಿ ಲಿಂಕಿಂಗ್ ಕೆನಾಲ್ ಗೆ 617 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ತುಮಕೂರಿನ ನಾಯಕರು ಇದನ್ನ ತಡೆ ಹಿಡಿದಿದ್ದಾರೆ. ಸಿಎಂ ಇದರ ಬಗ್ಗೆ ಗಮನಿಸಬೇಕು. ಅನುದಾನ ಬಿಡುಗಡೆಯಾದ್ರೂ ಯಾಕೆ  ತಡೆ ಹಿಡಿದಿದ್ದಾರೆ ಗೊತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರದ ವಿರುದ್ದ ಆರೋಪಿಸುತ್ತಿದ್ದಂತೆ ಗರಂ ಆದ ಸಿಎಂ  ಬಿಎಸ್ ವೈ ಆಯ್ತು ರೀ ಸ್ವಾಮಿ ಸಾಕು. ಭಾಷಣ ನಿಲ್ಲಿಸಿ ಎಂದು ಕಿಡಿಕಾರಿದ ಘಟನೆ ನಡೆಯಿತು.

Key words: tumakur- Congress MLA- praised – CM BS Yeddyurappa