ಅಹಮದಾಬಾದ್‌ನಲ್ಲಿ ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ ಟ್ರಂಪ್

Promotion

ಅಹ್ಮದಾಬಾದ್‌, ಫೆಬ್ರವರಿ 13, 2020 (www.justkannada.in): ಅಹ್ಮದಾಬಾದ್‌ನಲ್ಲಿ ನಿರ್ಮಿಸಲಾದ ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವನ್ನು ಫೆ. 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉದ್ಘಾಟಿಸಲಿದ್ದಾರೆ.

ಈ ಕ್ರೀಡಾಂಗಣದಲ್ಲಿ ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಮೊದಲ ಪಂದ್ಯ ಏರ್ಪಡುವ ಸಾಧ್ಯತೆಯಿದೆ. ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವುದು ಪ್ರಧಾನಿ ನರೇಂದ್ರಮೋದಿ ಅವರ ಕನಸಿನ ಯೋಜನೆಯಾಗಿತ್ತು.

ಇದರಂಗವಾಗಿ 53 ಸಾವಿರ ಆಸನ ಸಾಮರ್ಥ್ಯದ ಮೊಟೆರಾ ಕ್ರೀಡಾಂಗಣವನ್ನು 2015ರಲ್ಲಿ ಕೆಡವಲಾಗಿತ್ತು. ಆದೇ ಸ್ಥಳದಲ್ಲಿ ಇದೀಗ 1.10 ಲಕ್ಷ ಆಸನ ಸಾಮರ್ಥ್ಯದ ಆಧುನಿಕ ಸೌಕರ್ಯಗಳಿರುವ ಬೃಹತ್‌ ಕ್ರೀಡಾಂಗಣ ನಿರ್ಮಿಸಲಾಗಿದೆ.

ಇದಕ್ಕೆ ಸರ್ದಾರ್‌ ವಲ್ಲಭಭಾಯಿ ಕ್ರೀಡಾಂಗಣವೆಂದು ಪುನರ್‌ ನಾಮಕರಣ ಮಾಡಲಾಗಿದೆ. ಸುಮಾರು 100 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ