ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ವ್ಯಂಗ್ಯ: ಕೊರೊನಾ ಹೆಚ್ಚಳಕ್ಕೆ ಟ್ರಂಪ್ ಕಾರ್ಯಕ್ರಮ ಕೂಡ ಕಾರಣ-  ‘ಕೈ’ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ…

ಬೆಂಗಳೂರು,ಜೂ,1,2020(www.justkannada.in): ಕೊರೋನಾ ವೈರಸ್ ನಿಂದಾಗಿ ಸಂಕಷ್ಟ ಉಂಟಾಗಿರುವ ಹಿನ್ನೆಲೆ ಪ್ರಧಾನಿ ಮೋದಿ 20 ಲಕ್ಷ ಕೋಟಿ ಹಣ ಘೋಷಿಸಿದ್ದಾರೆ. ಆದರೆ ಜಿಡಿಪಿಯ 10% ಅಲ್ಲ ಬಜೆಟ್ ನ 1% ಹಣವನ್ನ ಘೋಷಿಸಿಲ್ಲ. ದಿನವೂ ಹೇಳಿದ್ದೇ ಹೇಳಿದ್ದು,ನಾವು ಕೇಳಿದ್ದೇ ಕೇಳಿದ್ದು ಇದು ಕನ್ನಡಿಯೊಳಗಿನ ಗಂಟಿನಂತೆ ಎಂದು ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕರು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜನವರಿ 30 ರಂದೇ ಕೊವಿಡ್ ಬಗ್ಗೆ ಗಮನಕ್ಕೆ ಬಂದಿತ್ತು. ಆದರೂ ಮೋದಿಯವ್ರು ಟ್ರಂಪ್ ಕರೆಸಿ ಸನ್ಮಾನ ಮಾಡಿದ್ರು. ದೇಶದಲ್ಲಿ ಟ್ರಂಪ್ ಕರೆಸಿ ಶೋ ಮಾಡಿದ್ರು. ಕೇಂದ್ರ ಆಗಲೇ ಎಚ್ಚೆತ್ತುಕೊಂಡಿದ್ದರೆ ಇಷ್ಟೆಲ್ಲಾ ಆಗ್ತಿರಲಿಲ್ಲ. ಕೊರೊನಾ ಹೆಚ್ಚಳಕ್ಕೆ ಟ್ರಂಪ್ ಕಾರ್ಯಕ್ರಮ ಕೂಡ ಕಾರಣ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯನ್ನ ಕುಟುಕಿದರು.

ಕೋವಿಡ್ 19 ನಿಂದಾಗಿ ದೇಶ ಅಲ್ಲೋಲ ಕಲ್ಲೋಲ…

ಕೋವಿಡ್ 19 ನಿಂದಾಗಿ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕಾರ್ಮಿಕರಿಗೆ ಸರ್ಕಾರ ಯಾವುದೇ ಸಹಾಯ ನೀಡ್ತಿಲ್ಲ. ಇವತ್ತು ಕಾರ್ಮಿಕ ಘಟಕಗಳೆಲ್ಲ ಸಂಕಷ್ಟದಲ್ಲಿದ್ದಾರೆ. ಎಂಎಸ್ ಎಂಇ ಘಟಕಗಳು ನಿಂತು ಹೋಗಿವೆ. ಅಲ್ಲಿ ಕೆಲಸ ಮಾಡ್ತಿದ್ದ 11 ಕೋಟಿ ಕಾರ್ಮಿಕರಿಗೆ ತೊಂದರೆಯಾಗಿದೆ. 8 ಕೋಟಿ ಅಸಂಘಟಿತ ಕಾರ್ಮಿಕರು ದೇಶದಲ್ಲಿದ್ದಾರೆ. ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಿದೆ. ಒಂದೆಡೆಯಿಂದ ಇನ್ನೊಂದೆಡೆ ಇವರು ಕೆಲಸಕ್ಕೆ ಓಡಾಡ್ತಾರೆ. ಇಂತವರ ಜೀವನ ಇಂದು ಅಸ್ತವ್ಯಸ್ಥವಾಗಿದೆ. ಇವರ ಜೊತೆ ಕೃಷಿ ಕಾರ್ಮಿಕರಿಗೂ ತೊಂದರೆಯಾಗಿದೆ. ಕೃಷಿ ಕ್ಷೇತ್ರದ ಉತ್ಪನ್ನಗಳು ಹಾಳಾಗಿಹೋಗಿವೆ. ಹಣವಿಲ್ಲದೆ ಗ್ರಾಹರಿಕೆ ಖರೀದಿ ಮಾಡುವ ಶಕ್ತಿಯೂ ಇಲ್ಲ. ಡಿಮ್ಯಾಂಡ್ ಇದ್ರೆ ಖರೀದಿ,ಖರೀದಿ ಇದ್ದರೆ ಉತ್ಪಾದನೆ. ಉತ್ಪಾದನೆ ಹೆಚ್ಚಾದರೆ ಉದ್ಯೋಗಾವಕಾಶ ಕೂಡ ಹೆಚ್ಚು. ಈಗ ಈ ಎಲ್ಲಾ ಚೈನ್ ಲಿಂಕ್ ಇವತ್ತು ಸಡಿಲಗೊಂಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.trump-program-responsible-coronas-increase-congress-leader-mallikarjuna-kharge-pm-modi

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಬಾಂಬೆ ಪರಿಸ್ಥಿತಿ ಬೇರೆ ,ಬೇರೆ ರಾಜ್ಯದ ಪರಿಸ್ಥಿತಿ ಬೇರೆ. ಬಾಂಬೆಗೆ ಎಲ್ಲಾ ರಾಜ್ಯಗಳಿಂದ ಜನರು ಬರ್ತಾರೆ. ಸ್ಲಂ ಏರಿಯಾದಲ್ಲಿ 30 ಲಕ್ಷ ಜನ ಇದ್ದಾರೆ. ಅದಕ್ಕೆ ಅಲ್ಲಿ ಹೆಚ್ಚು ಸೋಂಕು ಕಂಡುಬಂದಿದೆ. ಸೋಂಕನ್ನ ತಡೆಯೋಕೆ ಸರ್ಕಾರ ಕಠಿಣ ಪ್ರಯತ್ನ ಮಾಡ್ತಿದೆ. 39 ಸಾವಿರ ಪ್ರಕರಣ ಮುಂಬೈನಲ್ಲಿವೆ. ಪೂನಾದಲ್ಲಿ ರಾಜ್ಯದವರು ಸಾಕಷ್ಟಿದ್ದಾರೆ. 10 ಲಕ್ಷ ಜನ ಪೂನಾದಲ್ಲಿದ್ದಾರೆ.  ಅದಕ್ಕೆ ಹೆಚ್ಚಿನ ಸೋಂಕು ಕಂಡು ಬಂದಿದೆ. ಸರ್ಕಾರ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ನಡೆಸ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು

ನಮ್ಮ ಪಕ್ಷ ಕಾರ್ಮಿಕರ ಸಹಾಯಕ್ಕೆ ನಿಂತಿದೆ

ನಮ್ಮ ಪಕ್ಷ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಸಹಾಯಕ್ಕೆ ನಿಂತಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ನಮ್ಮವರು ಮಾಸ್ಕ್, ಸ್ಯಾನಿಟೈಸರ್ ಎಲ್ಲವನ್ನೂ ನೀಡ್ತಿದ್ದಾರೆ. ರೈಲುಗಳ ಪ್ರಯಾಣಕ್ಕೂ ಅವಕಾಶ ಮಾಡಿಕೊಡ್ತಿದ್ದೇವೆ. ೫೬೦ ಮಂದಿ ಲಾಕ್ ಡೌನ್ ನಿಂದ ಸಾವನ್ನಪ್ಪಿದ್ದಾರೆ. ಸೈಕಲ್,ನಡೆದು,ಅನ್ನನೀರಿಲ್ಲದೆ ಹೋಗುವಾಗ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಶ್ರಮಿಕ್ ರೈಲುಗಳನ್ನ ಕಾರ್ಮಿಕರಿಗೆ ಬಿಟ್ರು. 30 ಗಂಟೆಯಲ್ಲಿ‌ ತಲುಪುವ ರೈಲು 75  ಗಂಟೆ ತೆಗೆದುಕೊಂಡ್ವು. ಮಾಸ್ಕ್ ಕೊಟ್ಟಿದ್ದು, ಫೋಟೋ ಹಾಕಿದ್ದಷ್ಟೇ ಅವರಿಗೆ ಲಾಭ ಎಂದು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ಕಾರ್ಮಿಕರಿಗೆ ಇಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಅವರು ಊರಿಗೆ ಹೊರಟಿದ್ದು. ವ್ಯವಸ್ಥೆ ಮಾಡಿದ್ದರೆ ಯಾರೂ‌ ಹೋಗ್ತಿರಲಿಲ್ಲ. ಮೋದಿಯವರು ಎಲ್ಲವನ್ನೂ ಹೇಳ್ತಾರೆ. ಆದರೆ ಯಾವುದನ್ನೂ ಮಾಡಲಿಲ್ಲ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: Trump program – responsible – Corona’s –increase-congress leader-Mallikarjuna kharge-PM Modi