ಕೆಲಸಕ್ಕೆ ಹಾಜರಾಗದಿದ್ರೆ ಕಾನೂನು ಕ್ರಮ ಖಚಿತ- ಡಿಸಿಎಂ ಲಕ್ಷ್ಮಣ್ ಸವದಿ…

ಬೆಂಗಳೂರು,ಏಪ್ರಿಲ್,12,2021(www.justkannada.in):  ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಸಾರಿಗೆ ನೌಕರರು ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಈ ನಡುವೆ ಕೆಲಸಕ್ಕೆ ಹಾಜರಾಗದಿದ್ರೆ ಕಾನೂನು ಕ್ರಮ ಖಚಿತ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದ್ದಾರೆ.Sanskrit Vivia,8th event,30 people,Ph.D,43graduates,M.Phil,Awarded 

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನಾಳೆ ಪವಿತ್ರ ಹಿಂದೂ ಹಬ್ಬ. ಕಹಿ ಘಟನೆ ಮರೆತು ಸಿಹಿ ತಿಂದು ಸಂತೋಷಪಡೋಣ. ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಮುಂದೆ ಒಳ್ಳೆಯದಾಗುತ್ತದೆ. ಮೇ 4ರ ಬಳಿಕ ನೌಕರರ ಜತೆ ಮಾತುಕತೆ ನಡೆಸಲಾಗುತ್ತದೆ. ಮುಷ್ಕರ ಕೈಬಿಡದಿದ್ದರೇ ಕಾನೂನು ಕ್ರಮ ಖಚಿತ ಎಂದು ಎಚ್ಚರಿಸಿದರು.transport-worker-attending-work-legal-dcm-laxman-savadi

Key words: transport worker- attending- work – legal-DCM- Laxman Savadi.