ಬೆಂಗಳೂರಿಗರಿಗೆ ಶಾಕ್: ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳದ ಸುಳಿವು ನೀಡಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ….

ಬೆಂಗಳೂರು,ಫೆಬ್ರವರಿ,25,2021(www.justkannada.in):  ಪೆಟ್ರೋಲ್ , ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಈಗಾಗಲೇ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಂಗಳೂರಿಗರಿಗೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಶಾಕ್ ನೀಡಿದ್ದಾರೆ.jk

ಹೌದು, ಪೆಟ್ರೋಲ್ , ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೆ ಬಿಎಂಟಿಸಿ ಬಸ್ ಪ್ರಯಾಣದ ದರ ಹೆಚ್ಚಳ ಮಾಡುವ ಕುರಿತು ಡಿಸಿಎಂ ಲಕ್ಷ್ಮಣ್ ಸವದಿ ಸುಳಿವು ನೀಡಿದ್ದಾರೆ.Transport Minister –DCM-Laxman Saudi -hinted - hike - BMTC bus- fares.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಅವರು, ಸಿಎಂ ಬಿಎಸ್ ವೈ ಒಪ್ಪಿದರೇ ಬಿಎಂಟಿಸಿ ಬಸ್  ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತದೆ. ಬಿಎಂಟಿಸಿ  ಬಸ್ ದರ ಹೆಚ್ಚಳದ ಬಗ್ಗೆ ಸಿಎಂ ಬಿಎಸ್ ವೈ ಜತೆ  ಕುಳಿತು ಚರ್ಚಿಸುತ್ತೇನೆ. ಬಜೆಟ್ ಅಧಿವೇಶನ ಬಳಿಕ ಹೆಚ್ಚಿಸಿದರೇ ಬೇರೆ ರೀತಿ ಚರ್ಚೆಯಾಗುತ್ತದೆ. ಹೀಗಾಗಿ ಸಿಎಂ ಒಪ್ಪಿದರೇ ಇದೇ ಅಧಿವೇಶನದಲ್ಲಿ ದರ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಸಿಎಂ ಏನು ಹೇಳ್ತಾರೋ  ಹಾಗೆ ನಿರ್ಧಾರ ಮಾಡುತ್ತೇವೆ. ಸಿಎಂ ಒಪ್ಪಿದರೇ ಮಾತ್ರ ಬಸ್ ಪ್ರಯಾಣ ದರ ಹೆಚ್ಚಳ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Key words: Transport Minister –DCM-Laxman Saudi -hinted – hike – BMTC bus- fares.