ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಎನ್ ಐಎ ತನಿಖೆಗೆ  ವರ್ಗಾವಣೆ.

Promotion

ಶಿವಮೊಗ್ಗ,ಮಾರ್ಚ್,24,2022(www.justkannada.in):  ರಾಜ್ಯದಲ್ಲಿ ಭಾರಿ ಸದ್ಧು ಮಾಡಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನ ರಾಜ್ಯ ಗೃಹ ಇಲಾಖೆ ಎನ್ ಐಎ ತನಿಖೆಗೆ ವರ್ಗಾವಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿ 20ರಂದು  ಭಜರಂಗದಳದ ಕಾರ್ಯಕರ್ತ ಹರ್ಷ ರಾತ್ರಿ ವೇಳೆ ಶಿವಮೊಗ್ಗ ನಗರದ ಸಿಗೇಹಟ್ಟಿ ಬಡಾವಣೆ ಮನೆಯಿಂದ ಭಾರತಿ ಕಾಲೋನಿಗೆ ಸ್ನೇಹಿತರ ಜತೆ ತೆರಳಿದ್ದ. ಈ ವೇಳೆ ನಾಲ್ಕು ಮಂದಿ ಸ್ವಿಫ್ಟ್ ಕಾರಿನಲ್ಲಿ  ಬಂದು ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.

ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ‍್ಧಿಯಾಗಿ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು. ಪ್ರಕರಣ ಸಂಬಂಧ ಹತ್ಯೆಗೈದ ಆರೋಪಿಗಳನ್ನ ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ನಡುವೆ ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದರು.

ಇದೀಗ ಗೃಹ ಇಲಾಖೆ ಪ್ರಕರಣವನ್ನ .ಎನ್ ಐಎಗೆ ವರ್ಗಾಯಿಸಿದ್ದು, ಕೆಲವೇ ದಿನಗಳಲ್ಲಿ ಎನ್ ಐಎ ಟೀಂ ಶಿವಮೊಗ್ಗಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

Key words: Transferred – NIA –Harsha- murder case