ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್  ವಿಶ್ವನಾಥ್ ಸಹಿ ಫೋರ್ಜರಿ ಮಾಡಿ ವರ್ಗಾವಣೆ: ದೂರು ನೀಡಲು ನಿರ್ಧಾರ

Promotion

ಬೆಂಗಳೂರು,ಅ,11,2019(www.justkannada.in):   ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರ ಸಹಿ ಫೋರ್ಜರಿ ಮಾಡಿ ಅಧಿಕಾರಿಯನ್ನ ವರ್ಗಾವಣೆ ಮಾಡಿರುವ  ಪ್ರಕರಣ ಬೆಳಕಿಗೆ ಇದೀಗ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿ.ಕೆ.ಚಂದ್ರಕಾಂತ್ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.  ಸಿಎಂ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಅವರ ಸಹಿಯನ್ನ ಫೋರ್ಜರಿ ಮಾಡಿ ಈ ವರ್ಗಾವಣೆ ಮಾಡಲಾಗಿದೆ.

ಎಸ್.ಆರ್ ವಿಶ್ವನಾಥ್ ಅವರ ಲೆಟರ್ ಹೆಡ್  ಹಾಗೂ ನಕಲಿ ಸಹಿ  ಇರುವ ಪತ್ರಕ್ಕೆ ಸಿಎಂ ಯಡಿಯೂರಪ್ಪ ಅವರು ವರ್ಗಾಯಿಸಲಾಗುವುದು ಎಂದು ಸಹಿ ಹಾಕಿದ್ದಾರೆ . ಸೆಪ್ಟಂಬರ್ 18 ರಂದೇ ಸಿಎಂ ಬಿಎಸ್ ಯಡಿಯೂರಪ್ಪಗೆ ಈ ನಕಲಿ ಸಹಿ ಇರುವ ಪತ್ರ ಸಲ್ಲಿಸಲಾಗಿದೆ.

ಸಹಿ ಫೋರ್ಜರಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಧಾನಸೌಧ ಪೊಲೀಸ್ ಠಾಣೆಗೆ  ಎಸ್. ಆರ್ ವಿಶ್ವನಾಥ್ ದೂರು ನೀಡಲು ನಿರ್ಧರಿಸಿದ್ದಾರೆ.

Key words: Transfer -Forgery signed – SR Vishwanath-complain