ಜೆಡಿಎಸ್ ಮುಖಂಡರು, ನಾಯಕರನ್ನು ಬೂಸ್ಟ್ ಮಾಡಲು ನಾಳೆಯಿಂದ ತರಬೇತಿ ಕಾರ್ಯಾಗಾರ

Promotion

ಬೆಂಗಳೂರು, ಸೆಪ್ಟೆಂಬರ್ 26, 2021 (www.justkannada.in): ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಜೆಡಿಎಸ್ ಮಹತ್ವದ ಕ್ರಮ ಕೈಗೊಂಡಿದ್ದು, ಪಕ್ಷದ ಮುಖಂಡರಿಗೆ ತರಬೇತಿ ನೀಡಲು ಮುಂದಾಗಿದೆ.

ಸೆಪ್ಟೆಂಬರ್ 27 ರಿಂದ 4 ದಿನಗಳ ಕಾಲ ಜೆಡಿಎಸ್ ಪಕ್ಷದ ವತಿಯಿಂದ ಕಾರ್ಯಾಗಾರ ನಡೆಸಲಾಗುತ್ತಿದೆ. ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೊದಲ ಎರಡು ದಿನ ಶಾಸಕ ಸ್ಥಾನದ ಆಕಾಂಕ್ಷಿಗಳು, ಜೆಡಿಎಸ್ ಶಾಸಕರಿಗೆ ಕಾರ್ಯಾಗಾರ ನಡೆಯಲಿದೆ.

ಮೂರನೇ ದಿನ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಬೂತ್ ಮಟ್ಟದಲ್ಲಿ ಮಹಿಳಾ ಸಂಘಟನೆಯ ಕುರಿತಂತೆ ಜವಾಬ್ದಾರಿ ಕುರಿತು ಕಾರ್ಯಾಗಾರ ನಡೆಸಲಾಗುವುದು ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.

ಪಕ್ಷದ ವರಿಷ್ಠರಾದ ದೇವೇಗೌಡರು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಅಧಿಕಾರ ಪಡೆಯುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ಹೆಚ್.ಡಿ.ಕೆ. ತಿಳಿಸಿದ್ದಾರೆ.

key words: Training Workshop for jds leaders from Tomorrow to Boost part and workers